ನವದೆಹಲಿ: ಬಿಜೆಪಿ ದೇಶದಾದ್ಯಂತ ಸೂಫಿಸಂತರ ಸಮಾವೇಶ ನಡೆಸಲು ಯೋಜಿಸುತ್ತಿದೆ. ಸಮಾವೇಶದಲ್ಲಿ ಹಜರತ್ ನಿಜಾಮುದ್ದೀನ್, ಅಜ್ಮೀರ್ ಷರೀಫ್, ಬರೇಲಿ ಷರೀಫ್ ದರ್ಗಾದಂತಹ ಧಾರ್ಮಿಕ ಕೇಂದ್ರಗಳ ಸೂಫಿ ನಾಯಕರು ಇರುವ ಸಾಧ್ಯತೆಯಿದೆ.

ಪಕ್ಷದ ಅಲ್ಪಸಂಖ್ಯಾತ ವಿಭಾಗವು ಮಾರ್ಚ್‌ನಲ್ಲಿ ‘ಸೂಫಿ ಸಂತರ ಸಂವಾದ’ ಹೆಸರಿನಲ್ಲಿ ಸಮಾವೇಶವನ್ನು ನಡೆಸಲಿದೆ ಎಂದು ಈ ಪ್ರಕ್ರಿಯೆಯಲ್ಲಿ ತೊಡಗಿರುವ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಮೋದಿ ಅವರ ಅಭಿವೃದ್ಧಿ ಕಾರ್ಯಸೂಚಿ ಮತ್ತು ಬಿಜೆಪಿ ಎಲ್ಲ ಧರ್ಮಗಳನ್ನು ಹೇಗೆ ಒಳಗೊಳ್ಳುತ್ತದೆ ಎಂಬುದನ್ನು ಅರಿಯಲು ಈ ಸಮಾವೇಶ ಆಯೋಜಿಸಲಾಗುತ್ತಿದೆ. ಶೀಘ್ರದಲ್ಲೇ ಪ್ರಧಾನಿ ಅವರೊಂದಿಗೆ ಸೂಫಿ ಸಂತರ ಸಭೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.