ಬುಧವಾರ, ಜನವರಿ 19, 2022
26 °C
2023ರ ರಾಜಸ್ಥಾನ ವಿಧಾನಸಭೆ ಚುನಾವಣೆ

ರಾಜಸ್ಥಾನ | ಬಿಜೆಪಿ ಬಹುಮತ ಪಡೆಯಲಿದೆ: ಗೆಹ್ಲೋಟ್‌ಗೆ ಅಮಿತ್‌ ಶಾ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ, ರಾಜಸ್ಥಾನ (ಪಿಟಿಐ): ಬಿಜೆಪಿಯು ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕಳೆದ ವರ್ಷ ಆರೋಪ ಮಾಡಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಬಿಜೆಪಿಯು ಎಂದಿಗೂ ರಾಜಸ್ಥಾನ ಸರ್ಕಾರವನ್ನು ಉರುಳಿಸುವುದಿಲ್ಲ. ಬದಲು 2023ರ ವಿಧಾನಸಭೆ ಚುನಾವಣೆಯಲ್ಲಿ  ಮೂರನೇ ಎರಡರಷ್ಟು ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ. 

‘ತಮ್ಮ ಸರ್ಕಾರ ಯಾವಾಗ ಅಧಿಕಾರ ಕಳೆದುಕೊಳ್ಳುವುದೋ ಎಂದು ಅವರು ಯಾವಾಗಲೂ ಭೀತಿಯಲ್ಲೇ ಇರುತ್ತಾರೆ. ಅವರ ಸರ್ಕಾರವನ್ನು ಬೀಳಿಸಲು ಯಾರು ಹೊರಟಿದ್ದಾರೆ? ಬಿಜೆಪಿ ಎಂದೂ ಅಂತಹ ಪ್ರಯತ್ನ ನಡೆಸುವುದಿಲ್ಲ. ಪಕ್ಷವು ಜನರ ನಡುವೆ ಹೋಗುತ್ತದೆ. 2023ರ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ’ ಎಂದು ಇಲ್ಲಿ ನಡೆದ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯೊಂದರಲ್ಲಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು