ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಹಿಂದುತ್ವ ನಿಜವಾದ ಹಿಂದುತ್ವವಲ್ಲ: ಉದ್ಧವ್ ಠಾಕ್ರೆ

Last Updated 12 ಫೆಬ್ರುವರಿ 2023, 15:57 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿಯ ಹಿಂದುತ್ವ ನಿಜವಾದ ಹಿಂದುತ್ವವಲ್ಲ. ಯಾಕೆಂದರೆ ಹಿಂದುತ್ವವು ಸಮಾಜದಲ್ಲಿ ಬಿರುಕನ್ನು ಮೂಡಿಸುವುದಿಲ್ಲ. ನಿಜವಾದ ಹಿಂದುತ್ವ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದು ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಉತ್ತರ ಭಾರತೀಯ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುತ್ವ ಚಳವಳಿಗೆ ತಮ್ಮ ದಿವಂಗತ ತಂದೆ ಬಾಳಾಸಾಹೇಬ್ ಠಾಕ್ರೆ ಅವರ ಕೊಡುಗೆಯನ್ನು ಸ್ಮರಿಸಿದರು.

'ನಾವು ಹಿಂದೂ ಎಂದು ಗರ್ವದಿಂದ ಹೇಳಿ' ಇವರಿಗೆ (ಬಿಜೆಪಿ) ಧೈರ್ಯವಿದೆ ಎಂದು ಭಾವಿಸುವೀರಾ ಎಂದು ಪ್ರಶ್ನಿಸಿದರು.

ಮುಂಬೈಯಲ್ಲಿ ದಾವೂದಿ ಬೋಹ್ರಾ ಸಮುದಾಯದ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಉಲ್ಲೇಖ ಮಾಡಿರುವ ಅವರು, ನಾನು ಹಿಂದುತ್ವ ತೊರೆಯುತ್ತಿದ್ದೇನೆ ಎಂದು ಬಿಜೆಪಿ ಆರೋಪಿಸಿದೆ. ಇನ್ನೊಂದು ದಿನ ಬೋಹ್ರಾ ಕಾರ್ಯಕ್ರಮದಲ್ಲಿ ಪ್ರಧಾನಿ ಅವರೇ ಭಾಗವಹಿಸಿದರು. ಅದೇ ನಾನು ಅಲ್ಲಿಗೆ ಹೋಗಿ ಅಂತಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರೆ ಹಿಂದುತ್ವ ತೊರೆಯುತ್ತಿದ್ದೇನೆ ಎಂದು ಆರೋಪಿಸುತ್ತಿದ್ದರು ಎಂದು ತಿರುಗೇಟು ನೀಡಿದರು.

1992–93ರಲ್ಲಿ ಮುಂಬೈನಲ್ಲಿ ನಡೆದ ಕೋಮುಗಲಭೆ ಮತ್ತು ಕೋವಿಡ್ ಸಾಂಕ್ರಾಮಿಕದ ಕಠಿಣ ಸಮಯದಲ್ಲಿ ಪಕ್ಷವು ಜನರ ಸಂಕಷ್ಟಕ್ಕೆ ನೆರವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT