ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದಿನದಂದು ‘ಯುವ ಸಂಕಲ್ಪ ಯಾತ್ರೆ’ಗೆ ಚಾಲನೆ

ಬಿಜೆಪಿ ಯುವ ಘಟಕದಿಂದ ವರ್ಷಪೂರ್ತಿ ಕಾರ್ಯಕ್ರಮಗಳ ಆಯೋಜನೆ
Last Updated 13 ಆಗಸ್ಟ್ 2021, 16:50 IST
ಅಕ್ಷರ ಗಾತ್ರ

‌ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ನವಭಾರತ’ದ ದೃಷ್ಟಿಕೋನವನ್ನು ದೇಶದಾದ್ಯಂತ ಕೊಂಡೊಯ್ಯಲು ಬಿಜೆಪಿಯ ಯುವ ಘಟಕವು ‘ಯುವ ಸಂಕಲ್ಪ ಯಾತ್ರೆ’ಯನ್ನು ವರ್ಷಪೂರ್ತಿ ಕೈಗೊಂಡಿದ್ದು, ಸ್ವಾತಂತ್ರ್ಯ ದಿನದಂದು ಯಾತ್ರೆಗೆ ಚಾಲನೆ ದೊರೆಯಲಿದೆ.

‘10 ಲಕ್ಷಕ್ಕೂ ಹೆಚ್ಚು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸ್ವಯಂಸೇವಕರು ಸಂಘಟನೆಯ 13,350 ಮಂಡಲಗಳಲ್ಲಿ ರಾಷ್ಟ್ರಗೀತೆಯ ಸಾಮೂಹಿಕ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 15ರಂದು ಉದಯಪುರದಲ್ಲಿ ಯುವ ಸಂಕಲ್ಪ ಯಾತ್ರೆಯನ್ನು ಆರಂಭಿಸಲಾಗುವುದು’ ಎಂದು ಬಿಜೆವೈಎಂ ಅಧ್ಯಕ್ಷ ತೇಜಸ್ವಿ ಸೂರ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಗುಜರಾತ್‌ನ ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ಕರ್ನಾಟಕದ 37 ಸ್ಥಳಗಳಲ್ಲಿ ಯಾತ್ರೆಯನ್ನು ಕೈಗೊಳ್ಳಲಾಗುವುದು. ಯಾತ್ರೆಯ ಅಂಗವಾಗಿ ಮೂರು ದಿನಗಳ ಮ್ಯಾರಥಾನ್ ನಡೆಯಲಿದೆ. ಅಂತೆಯೇ 75 ಸ್ಥಳಗಳಲ್ಲಿ 75 ಕಿ.ಮೀ.ಗಳ ಸೈಕಲ್ ರ‍್ಯಾಲಿಯನ್ನೂ ಆಯೋಜಿಸಲಾಗಿದೆ’ ಎಂದೂ ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT