ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ವಶಕ್ಕೆ ಅನಿಲ್‌ ದೇಶ್‌ಮುಖ್‌: ಬಾಂಬೆ ಹೈಕೋರ್ಟ್‌ ಆದೇಶ

Last Updated 7 ನವೆಂಬರ್ 2021, 9:21 IST
ಅಕ್ಷರ ಗಾತ್ರ

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ತನಿಖೆಗಾಗಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರನ್ನು ನ. 12ರವರೆಗೂ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿ ಬಾಂಬೆ ಹೈಕೋರ್ಟ್‌ ಆದೇಶಿಸಿದೆ.

ಈ ಮೂಲಕ ನ್ಯಾಯಾಂಗ ಬಂಧನಕ್ಕೆಒಪ್ಪಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.ವಿಶೇಷ ನ್ಯಾಯಾಲಯವು ಶನಿವಾರ ದೇಶಮುಖ್‌ಗೆ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಮಾಧವ್ ಜಾಮ್ದಾರ್‌ ನೇತೃತ್ವದ ರಜಾ ಅವಧಿಯ ಪೀಠವು ವಿಚಾರಣೆ ನಡೆಸಿತು.

ದೇಶಮುಖ್‌ ಪರ ವಕೀಲರಾದ ವಿಕ್ರಮ್‌ ಚೌಧರಿ ಮತ್ತು ಅನಿಕೇತ್‌ ನಿಕಮ್‌ ಅವರು, ಇ.ಡಿ ಮನವಿಯನ್ನು ನಾವು ವಿರೋಧಿಸಿದರೂ, ದೇಶಮುಖ್‌ ಅವರು ಸ್ವಯಂ‌ ಆಗಿ ಇ.ಡಿ ವಿಚಾರಣೆಗೆ ಒಳಪಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಬಹುಕೋಟಿ ಹಣಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಸುದೀರ್ಘ 12 ಗಂಟೆ ವಿಚಾರಣೆಯ ನಂತರ ನ. 1 ರಂದು ಇ.ಡಿ ದೇಶಮುಖ್‌ ಅವರನ್ನು ಬಂಧಿಸಿತ್ತು. ನ.2 ರಂದು ದೇಶಮುಖ್‌ ಅವರನ್ನು ನವೆಂಬರ್‌ 6 ರವರೆಗೆ ಇ.ಡಿ ವಶಕ್ಕೆ ಒಪ್ಪಿಸಲಾಗಿತ್ತು.

ಶನಿವಾರ ಮತ್ತೆ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಇ.ಡಿ ಮತ್ತಷ್ಟು ದಿನ ವಶಕ್ಕೆ ನೀಡುವಂತೆ ಕೇಳಿತ್ತು. ಆದರೆ ವಿಶೇಷ ನ್ಯಾಯಾಲಯವು ದೇಶ್‌ಮುಖ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದನ್ನು ಇ.ಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT