ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಗಡಿಯಲ್ಲಿ ಎಕೆ-47 ಮತ್ತು ಎಂ-16 ರೈಫಲ್ ತುಂಬಿದ್ದ ಬ್ಯಾಗ್ ವಶಕ್ಕೆ

Last Updated 12 ಸೆಪ್ಟೆಂಬರ್ 2020, 13:13 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಪಾಕ್ ಗಡಿಯಲ್ಲಿರುವ ಹೊಲವೊಂದರಲ್ಲಿಮೂರು ಎಕೆ-47 ಮತ್ತು ಎರಡು ಎಂ-16 ರೈಫಲ್‌ಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂದು ವಶಪಡಿಸಿಕೊಂಡಿದೆ.

ಶೋಧ ಕಾರ್ಯಾಚರಣೆ ವೇಳೆ, ಬಿಎಸ್‌ಎಫ್‌ ಪಡೆಗಳು ಬೆಳಿಗ್ಗೆ 7 ಗಂಟೆ ಸುಮಾರಿಗೆ ಗಡಿಯ ಸಮೀಪ ಹೊಲವೊಂದರಲ್ಲಿ ಬಿದ್ದಿದ್ದ ಬ್ಯಾಗ್‌ನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಕೆ-47 ರೈಫಲ್‌ಗೆ ಬಳಸುವ ಆರು ಮ್ಯಾಗಜೀನ್‌ಗಳು ಮತ್ತು 91 ಗುಂಡುಗಳು, ಎಂ-16 ರೈಫಲ್‌ನ 4 ಮ್ಯಾಗಜೀನ್‌ಗಳು ಮತ್ತು 51 ಗುಂಡುಗಳು, 4 ಮ್ಯಾಗಜೀನ್‌ ಸಹಿತ 2 ಪಿಸ್ತೂಲ್‌ಗಳು, 20 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಂತರರಾಷ್ಟ್ರೀಯ ಗಡಿಯಲ್ಲಿನ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಅಬೋಹಾರ್ ಮೂಲಕ ಪಾಕಿಸ್ತಾನದಿಂದ ದೇಶ ವಿರೋಧಿ ಕೃತ್ಯಕ್ಕೆ ನೆರವಾಗಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಸದ್ಯ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT