ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಭೂಗತ ಸುರಂಗ ಪತ್ತೆ ಹಚ್ಚಿದ ಬಿಎಸ್‌ಎಫ್‌

Last Updated 4 ಮೇ 2022, 19:31 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಪಾಕಿಸ್ತಾನದ ನುಸುಳುಕೋರರು ಭಾರತದ ಗಡಿ ಪ್ರವೇಶಿಸಿದ್ದರೆನ್ನಲಾದ ಶಂಕಿತ ಭೂಗತ ಸುರಂಗವನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಬುಧವಾರ ಪತ್ತೆ ಹಚ್ಚಿದೆ.

‘ಸಾಂಬಾ ಜಿಲ್ಲೆಯ ಚಕ್ ಫಕ್ವಿರಾ ಗಡಿ ಚೌಕಿಯಲ್ಲಿ ಬುಧವಾರ ಸಂಜೆ ಸುರಂಗ ಪತ್ತೆಯಾಗಿದ್ದು, ಬೇಲಿ ಸಮೀಪದ ಸಾಮಾನ್ಯ ಪ್ರದೇಶದಲ್ಲಿ ಕಂಡು ಬಂದಿರುವ ಸಣ್ಣ ದ್ವಾರವನ್ನು ಭೂಗತ ಸುರಂಗವೆಂದು ಶಂಕಿಸಲಾಗಿದೆ. ಕತ್ತಲು ಕವಿದಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಗುರುವಾರ ಕಾರ್ಯಾಚರಣೆ ಮುಂದುವರೆಯಲಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಲಿದೆ’ ಎಂದು ಬಿಎಸ್‌ಎಫ್‌ನ ವಕ್ತಾರರು ತಿಳಿಸಿದರು.

‘ಅಂತರರಾಷ್ಟ್ರೀಯ ಗಡಿಯಿಂದ 150 ಮೀಟರ್‌ ಹಾಗೂ ಗಡಿ ಬೇಲಿಯಿಂದ 50 ಮೀಟರ್‌, ಭಾರತದ ಕಡೆಯಿಂದ 900 ಮೀಟರ್‌ ದೂರದಲ್ಲಿರುವ ಪಾಕಿಸ್ತಾನದ ಚಮನ್‌ ಖುರ್ದ್‌ (ಫಿಯಾಜ್‌) ಚೌಕಿ ಎದುರು ಶಂಕಿತ ಸುರಂಗ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕಣಿವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಎರಡು ದಿನಗಳ ಮುನ್ನ (ಏ.22) ಜಮ್ಮುವಿನ ಸುಂಜ್ವಾನ್‌ ಸೇನೆ ನೆಲೆ ಬಳಿ ಪಾಕಿಸ್ತಾನದ ನುಸುಳುಕೋರರ ಆತ್ಮಾಹುತಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಭೂಗತ ಸುರಂಗ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತ್ತು. ಆತ್ಮಾಹುತಿ ದಾಳಿಕೋರರು ಭೂಗತ ಸುರಂಗದ ಮೂಲಕ ಕಣಿವೆ ಪ್ರದೇಶವನ್ನು ಪ್ರವೇಶಿಸಿರಬಹುದು ಎಂಬ ವರದಿಯ ಹಿನ್ನೆಲೆಯಲ್ಲಿ ಬಿಎಸ್‌ಎಫ್‌ ಭೂಗತ ಸುರಂಗ ಹುಡುಕಾಟಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT