ಶುಕ್ರವಾರ, ಮೇ 20, 2022
25 °C

ಪಾಕ್‌ನ ಇಬ್ಬರು ನುಸುಳುಕೋರರ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪಾಕಿಸ್ತಾನದ ಇಬ್ಬರು ಶಸ್ತ್ರಸಜ್ಜಿತ ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಅಂತರರಾಷ್ಟ್ರೀಯ ಗಡಿಯ ಸಮೀಪ ಹತ್ಯೆಗೈದಿದ್ದಾರೆ’ ಎಂದು ಬಿಎಸ್‌ಎಫ್‌ ಗುರುವಾರ ತಿಳಿಸಿದೆ.  

‘ಅಮೃತಸರದ ರಜತಲ್‌ ಗಡಿಯ ಸನಿಹ ಗುರುವಾರ ಮುಂಜಾನೆ 2.20ರ ಸುಮಾರಿಗೆ ಇಬ್ಬರು ಶಂಕಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ಸಿಬ್ಬಂದಿ ಅವರನ್ನು ಹೊಡೆದುರುಳಿಸಿದ್ದಾರೆ’ ಎಂದು ಬಿಎಸ್‌ಎಫ್‌ ವಕ್ತಾರ ಹೇಳಿದ್ದಾರೆ. 

‘ಸ್ಥಳದಲ್ಲಿ ಪರಿಶೀಲಿಸಿದಾಗ ಎಕೆ–56 ರೈಫಲ್‌, ಅರೆ ಸ್ವಂಯಚಾಲಿತ ರೈಫಲ್‌, ಪಿಸ್ತೂಲ್, 90 ಬುಲೆಟ್‌ಗಳು, 5 ಮ್ಯಾಗಜೀನ್‌ ಹಾಗೂ ಸುಮಾರು ಹತ್ತು ಅಡಿ ಉದ್ದದ ಎರಡು ಪಿವಿಸಿ ಪೈಪ್‌ಗಳು ದೊರೆತಿವೆ’ ಎಂದೂ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು