ಸೋಮವಾರ, ಅಕ್ಟೋಬರ್ 18, 2021
27 °C

ಪಾಕಿಸ್ತಾನ ಗಡಿಯಲ್ಲಿ ಶಂಕಿತ ಡ್ರೋನ್‌ನತ್ತ ಬಿಎಸ್‌ಎಫ್‌ನಿಂದ ಗುಂಡು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ ಬೆಳಿಗ್ಗೆ ಭಾರತದತ್ತ ಬರುತ್ತಿದ್ದ ಶಂಕಿತ ಹಾರುವ ವಸ್ತುವೊಂದನ್ನು ಗುರುತಿಸಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿ ಅದರತ್ತ ಗುಂಡು ಹಾರಿಸಿದ್ದು, ಅದು ಪಾಕಿಸ್ತಾನದತ್ತ ವಾಪಸಾಗಿದೆ.

‘ಬೆಳಿಗ್ಗೆ 5.30ರ ಸುಮಾರಿಗೆ ಆಗಸದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಬೆಳಕಿನ ಮಿಣುಕುತ್ತಿರುವುದು ಕಾಣಿಸಿತು. ತಕ್ಷಣ ಬಿಎಸ್‌ಎಫ್‌ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದರು. ಹಾರುವ ವಸ್ತು ಬಳಿಕ ಪಾಕಿಸ್ತಾನದತ್ತ ಹೋಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹಾರಿದ ವಸ್ತು ಡ್ರೋನ್ ಇರಬಹುದು ಎಂಬ ಶಂಕೆ ಇದ್ದು, ಪೊಲೀಸರ ನೆರವಿನಿಂದ ಸ್ಥಳವನ್ನು ಪರಿಶೀಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು