ಗುರುವಾರ , ಮಾರ್ಚ್ 30, 2023
24 °C

ಯುಪಿ ಚುನಾವಣೆ: ಯಾವುದೇ ಮಾಫಿಯಾ ವ್ಯಕ್ತಿಗೆ ಬಿಎಸ್‌ಪಿ ಟಿಕೆಟ್‌ ಇಲ್ಲ- ಮಾಯಾವತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮಾಫಿಯಾ ವ್ಯಕ್ತಿಗೆ ಬಿಎಸ್‌ಪಿಯಿಂದ ಟಿಕೆಟ್‌ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಮಾಯಾವತಿ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, 'ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮಾಫಿಯಾ ಅಥವಾ ಬಲಿಷ್ಠ ವ್ಯಕ್ತಿಗೆ ಪಕ್ಷದ ಟಿಕೆಟ್ ಸಿಗದಂತೆ ನೋಡಿಕೊಳ್ಳಲಾಗುವುದು' ಎಂದು ತಿಳಿಸಿದ್ದಾರೆ. 

ಇದೇ ವೇಳೆ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಭೀಮ್ ರಾಜ್‌ಭರ್ ಅವರನ್ನು ಮವು ವಿಧಾನಸಭೆ ಕ್ಷೇತ್ರದಿಂದ  ಕಣಕ್ಕಿಳಿಸಲಾಗುವುದು ಎಂದು ಮಾಯಾವತಿ ಘೋಷಿಸಿದ್ದಾರೆ.

ಮವು ಕ್ಷೇತ್ರದಿಂದ ಬಿಎಸ್‌ಪಿ ಶಾಸಕರಾಗಿ ಮುಖ್ತಾರ್ ಅನ್ಸಾರಿ ಐದು ಬಾರಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ದರೋಡೆ, ಕೊಲೆಯಂತಹ 52 ಗಂಭೀರ ಪ್ರಕರಣಗಳು ದಾಖಲಾಗಿವೆ.  ಅನ್ಸಾರಿ ಪ್ರಸ್ತುತ ಜೈಲುವಾಸದಲ್ಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು