ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಮತ ಎಣಿಕೆ: ವಿಜಯೋತ್ಸವ ಮೆರವಣಿಗೆಗಳ ಮೇಲೆ ನಿಷೇಧ

ಅಧಿಕಾರಿಗಳಿಗೆ ನೆನಪಿಸಿದ ಚುನಾವಣಾ ಆಯೋಗ
Last Updated 2 ನವೆಂಬರ್ 2021, 7:33 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು. ಫಲಿತಾಂಶ ಹೊರಬಿದ್ದ ನಂತರ ವಿಜಯೋತ್ಸವದ ಮೆರವಣಿಗೆಗಳನ್ನು ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ.

ಕೋವಿಡ್‌–19 ಪ್ರಸರಣ ತಡೆಯುವ ಸಂಬಂಧ ವಿಜಯೋತ್ಸವ ಹಾಗೂ ಮೆರವಣಿಗೆಗಳ ಮೇಲೆ ಈಗಾಗಲೇ ನಿಷೇಧ ಹೇರಿರುವುದನ್ನು ಆಯೋಗವು ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ನೆನಪಿಸಿದೆ.

ಕರ್ನಾಟಕದ ಹಾನಗಲ್‌, ಸಿಂದಗಿ ಸೇರಿದಂತೆ ವಿವಿಧ ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳು ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT