ಬುಧವಾರ, ಮಾರ್ಚ್ 29, 2023
28 °C

ನೀವು ಕಣ್ಣುಮುಚ್ಚಿ ಕುಳಿತಿದ್ದೀರಿ: ಸೋನಿಯಾಗೆ ರಾಜೀನಾಮೆ ಪತ್ರ ಬರೆದ ಅಮರಿಂದರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ಮಂಗಳವಾರ ಪತ್ರವನ್ನು ಕಳುಹಿಸಿದ್ದಾರೆ. ಆ ನಂತರ ಅಧಿಕೃತವಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

'ನನ್ನನ್ನು ಮತ್ತು ನನ್ನ ಆಡಳಿತವನ್ನು ನಿಂದಿಸಿದ್ದಾರೆ ಎಂಬುದು ಸಿಧು ಅವರ ಏಕೈಕ ಖ್ಯಾತಿಯಾಗಿದೆ. ಸಿಧು ಅವರನ್ನು ರಾಹುಲ್ ಮತ್ತು ಪ್ರಿಯಾಂಕಾ ಬೆಂಬಲಿಸಿದರು. ಆದರೆ, ನೀವು ಹರೀಶ್ ರಾವತ್ ಅವರ ಮಾತುಗಳಿಗೆ ತಲೆದೂಗಿದ್ದೀರಿ. ಈ ವ್ಯಕ್ತಿಯ(ಸಿಧು) ದುಷ್ಕೃತ್ಯಗಳನ್ನು ನೋಡದೇ ಕಣ್ಣು ಮುಚ್ಚಿ ಕುಳಿತಿದ್ದೀರಿ' ಎಂದು ಸೋನಿಯಾಗೆ ಬರೆದ ಪತ್ರದಲ್ಲಿ ಕ್ಯಾಪ್ಟನ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ ತೊರೆದಿದ್ದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಹೊಸ ಪಕ್ಷದ ಹೆಸರನ್ನು ಮಂಗಳವಾರ ಘೋಷಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಧು ಅವರೊಂದಿಗಿನ ತೀವ್ರ ಸಂಘರ್ಷದ ನಡುವೆ ಅಮರಿಂದರ್‌ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು