ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಮೇಲೆ ಗುಂಡು ಹಾರಿಸಿದ ದನ ಕಳ್ಳಸಾಗಣೆದಾರರು

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಅಂತರ ರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಮೇಲೆ ದನ ಕಳ್ಳಸಾಗಣೆದಾರರು ಗುಂಡಿನ ದಾಳಿ ನಡೆಸಿದ್ದಾರೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ ಘಟನೆ ನಡೆದಿದ್ದು, ಗಡಿಯಾಚೆಗಿನ ಕಳ್ಳಸಾಗಣೆಯ ವೇಳೆ ಕೃತ್ಯ ನಡೆದಿದೆ.
ಕೂಚ್ ಬೆಹಾರ್ ಜಿಲ್ಲೆಯ ಫಲಕತಾ ಸೆಕ್ಟೆರ್‌ನ ಪುತಿಯಾ ಬಾರಾಮಾಸಿಯಾ ಗಡಿ ಪೋಸ್ಟ್ ಬಳಿ ಭಾನುವಾರ ಮುಂಜಾನೆ 5.30ರ ಹೊತ್ತಿಗೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಬಿಎಸ್ಎಫ್ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ.
ಬಾಂಗ್ಲಾದೇಶದ ಕಡೆಯಿಂದ 20-25 ದುಷ್ಕರ್ಮಿಗಳು ಮತ್ತು ಭಾರತೀಯ ಕಡೆಯಿಂದ 18-20 ಕಳ್ಳಸಾಗಾಣೆದಾರರ ಅನುಮಾನಾಸ್ಪದ ಚಲನೆಯನ್ನು ಬಿಎಸ್ಎಫ್ ಯೋಧರು ಗಮನಿಸಿದ್ದರು.
ಇದನ್ನೂ ಓದಿ: ಉತ್ತರಪ್ರದೇಶ: ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗಳ ಬಂಧನ
ಭಾರತದಿಂದ ಬಾಂಗ್ಲಾದೇಶಕ್ಕೆ ದನಗಳನ್ನು ಕಳ್ಳಸಾಗಣೆ ಮಾಡಲು ಎರಡೂ ಕಡೆಯವರು ಪ್ರಯತ್ನಿಸುತ್ತಿದ್ದರು. ಇವರನ್ನು ಚದುರಿಸಲು ಸೈನಿಕರು ಗ್ರೆನೇಡ್ ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದರು.
ಭಾರತ ಮೂಲದ ಕಳ್ಳಸಾಗಾಣಿಕೆದಾರರು ಬಿಎಸ್‌ಎಫ್ ಮೇಲೆ ಗುಂಡು ಹಾರಿಸಿದರು. ತಕ್ಷಣ ಬಿಎಸ್‌ಎಫ್ ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಬೆದರಿದ ದುಷ್ಕರ್ಮಿಗಳು ಪಾಲಾಯನಗೈದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.