ಬಿಎಸ್ಎಫ್ ಯೋಧರಿಗೆ ಗುಂಡುಹಾರಿಸಿದ ದನ ಕಳ್ಳಸಾಗಣೆದಾರರು

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಭಾರತ– ಬಾಂಗ್ಲಾದೇಶದ ಅಂತರರಾಷ್ಟ್ರೀಯ ಗಡಿಯಲ್ಲಿ ದನ ಕಳ್ಳಸಾಗಣೆದಾರರು ಬಿಎಸ್ಎಫ್ ಯೋಧರ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಕೂಚ್ ಬೆಹರ್ ಜಿಲ್ಲೆಯ ಫಲಕತಾ ಸೆಕ್ಟರ್ನಲ್ಲಿರುವ ಪುಟಿಯಾ ಬರಾಮಾಸಿಯಾ ಗಡಿ ಪೋಸ್ಟ್ ಬಳಿ ದನಕಳ್ಳಸಾಗಣೆದಾರರು, ಭಾನುವಾರ ಮುಂಜಾನೆ 5.30 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ್ದಾರೆ. ಅದೃಷ್ಟವಶಾತ್ ಯಾವೊಬ್ಬ ಯೋಧರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಂಗ್ಲಾದೇಶದ ಕಡೆಯ ಸುಮಾರು 20ರಿಂದ 25 ಮಂದಿ ಮತ್ತು ಭಾರತದ ಕಡೆಯ 18ರಿಂದ 20 ಮಂದಿ ಕಳ್ಳ ಸಾಗಣೆದಾರರ ಅನುಮಾನಾಸ್ಪದ ಚಲನವಲನ ಬಿಎಸ್ಎಫ್ ಯೋಧರ ಕಣ್ಣಿಗೆ ಬಿದ್ದಿತ್ತು. ಭಾರತದ ಕಡೆಯಿಂದ ಬಾಂಗ್ಲಾದೇಶದ ಕಡೆಗೆ ದನಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಯೋಧರು ಗ್ರೆನೇಡ್ ಸಿಡಿಸಿದರು. ಆಗ ಭಾರತದ ಕಳ್ಳಸಾಗಣೆದಾರರು ಬಿಎಸ್ಎಫ್ ಯೋಧರ ಮೇಲೆ ಗುಂಡು ಹಾರಿಸಿದರು. ಯೋಧರು ಪ್ರತಿದಾಳಿ ನಡೆಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದನ ಕಳ್ಳಸಾಗಣೆದಾರರು ಬಳಸಿದ ಎರಡು ಜೀವಂತ ಮತ್ತು ಎರಡು ಖಾಲಿ ಕಾಟ್ರಿಡ್ಜ್ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.