ಲಂಚ ಹಗರಣ: ಸಿಬಿಐ ಡಿಎಸ್ಪಿ ಬಂಧನ

ನವದೆಹಲಿ: ಸಿಬಿಐ ಸಂಸ್ಥೆಯೊಳಗೇ ಲಂಚದ ಹಗರಣಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ.ರಿಶಿ, ಇನ್ಸ್ಪೆಕ್ಟರ್ ಕಪಿಲ್ ಧನ್ಕಡ್ ಹಾಗೂ ವಕೀಲರೊಬ್ಬರನ್ನು ಸಿಬಿಐ ಬಂಧಿಸಿದೆ.
ಆರೋಪಿಗಳು, ₹4300 ಕೋಟಿ ಮೌಲ್ಯದ ಬ್ಯಾಂಕ್ ಸಾಲವನ್ನು ಪಡೆದು ಅನ್ಯ ಕಾರ್ಯಕ್ಕೆ ವಿನಿಯೋಗಿಸಿದ ಕಂಪನಿಗಳಿಂದ ಲಂಚ ಪಡೆದು ಅವರಿಗೆ ಸಹಾಯ ಮಾಡುತ್ತಿದ್ದರು.
ಉತ್ತರ ಪ್ರದೇಶದ ಸಹರಾನ್ಪುರ್ ಜಿಲ್ಲೆಯಲ್ಲಿರುವ ರಿಶಿ ಅವರ ನಿವಾಸದಲ್ಲೂ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದು, ರೂರ್ಕಿಯಲ್ಲಿರುವ ಅವರ ಪತ್ನಿಯ ಮನೆಯಲ್ಲೂ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.