ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗೆ ₹1,006 ಕೋಟಿ ವಂಚನೆ: ಬೆಸ್ಟ್‌ ಫುಡ್‌ ಲಿ.ವಿರುದ್ಧ ಸಿಬಿಐ ಪ್ರಕರಣ

Last Updated 10 ನವೆಂಬರ್ 2020, 16:28 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ ಬ್ಯಾಂಕ್‌ ಒಕ್ಕೂಟಕ್ಕೆ ₹1,006.46 ಕೋಟಿ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಸುಮತಿ ಅಕ್ಕಿ ಸಂಸ್ಕರಣಕಾರರಾದ ಬೆಸ್ಟ್‌ ಫುಡ್‌ ಕಂಪನಿ ವಿರುದ್ಧ ಸಿಬಿಐ ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದೆ.

ಸಿಬಿಐ ಅಧಿಕಾರಿಗಳು ದೆಹಲಿ ಹಾಗೂ ಚಂಡೀಗಡದಲ್ಲಿರುವ ಕಂಪನಿಯ ನಾಲ್ಕು ಕಚೇರಿಗಳಲ್ಲಿ ಹಾಗೂ ಮುಖ್ಯಸ್ಥ ಮೊಹಿಂದರ್‌ ಪಾಲ್‌ ಜಿಂದಾಲ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿನೇಶ್‌ ಗುಪ್ತಾ ಅವರ ಮನೆಗಳಲ್ಲೂ ಮಂಗಳವಾರ ಶೋಧ ನಡೆಸಿದ್ದಾರೆ.

‘2015 ಏ.1ರಿಂದ 2018 ಮಾರ್ಚ್‌ 31ರ ಅವಧಿಯಲ್ಲಿ ಪಡೆದುಕೊಂಡ ಸಾಲವನ್ನು ಇತರೆ ಉದ್ದೇಶಗಳಿಗಾಗಿ ಬಳಸಿಕೊಂಡಿದೆ. ಪಡೆದುಕೊಂಡ ಸಾಲವನ್ನು ಮರುಪಾವತಿಸದ ಕಾರಣ 2016 ಸೆ.17ರಂದು ವಸೂಲಾಗದ ಸಾಲದ ಪಟ್ಟಿಗೆ ಕಂಪನಿಯ ಖಾತೆಯನ್ನು ಸೇರಿಸಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಕಂಪನಿಯ ಬ್ಯಾಲೆನ್ಸ್‌ ಶೀಟ್‌ನಲ್ಲಿ ಅವ್ಯವಹಾರ ಹಾಗೂ ಸಾಲದ ಹಣವನ್ನು ಇತರೆ ಉದ್ದೇಶಗಳಿಗೆ ಬಳಸಿರುವುದು ಪತ್ತೆಯಾಗಿದೆ’ ಎಂದು ಎಸ್‌ಬಿಐ ದೂರಿನಲ್ಲಿ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT