ಶುಕ್ರವಾರ, ಏಪ್ರಿಲ್ 23, 2021
27 °C

ಪಂಜಾಬ್‌, ಹರಿಯಾಣದ ಎಫ್‌ಸಿಐ ಗೋದಾಮುಗಳ ಮೇಲೆ ಸಿಬಿಐ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಂಜಾಬ್‌ ಮತ್ತು ಹರಿಯಾಣದಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) 20 ಗೋದಾಮುಗಳ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿದೆ.

ಇಲ್ಲಿನ ಎಫ್‌ಸಿಐ ಗೋದಾಮುಗಳ ಅವ್ಯವಹಾರ ಮತ್ತು ಅಕ್ರಮಗಳಿಗೆ ಸಂಬಂಧಿಸಿಂತೆ ಹಲವು ದೂರುಗಳ ಬಂದ ಕಾರಣ ಸಿಬಿಐ ಈ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ವ್ಯವಹಾರಗಳು ನಡೆಯುವ ಸ್ಥಳಗಳಲ್ಲಿ ಭ್ರಷ್ಟಾಚರ ತಡೆಯುವ ಉದ್ದೇಶದ ಭಾಗವಾಗಿ ಈ ಪರಿಶೀಲನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಎರಡೂ ರಾಜ್ಯಗಳ ಗೋದಾಮುಗಳ ಮೇಲೆ ಎಫ್‌ಸಿಐನ ಜಾಗೃತಿ ದಳದ ತಂಡಗಳೊಂದಿಗೆ ಜಂಟಿಯಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು