ಸೋಮವಾರ, ಜೂನ್ 21, 2021
26 °C

ಮೌಲ್ಯಾಂಕನ ಪಟ್ಟಿ: ಶಾಲೆಗಳಿಗೆ ಗಡುವು ವಿಸ್ತರಿಸಿದ ಸಿಬಿಎಸ್‌ಇ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಶಾಲೆಗಳು 10ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪಟ್ಟಿಯನ್ನು ಕಳುಹಿಸಬೇಕಾದ ಅವಧಿಯನ್ನು ಜೂನ್‌ 30ರವರೆಗೆ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ವಿಸ್ತರಿಸಿದೆ.

ಸಿಬಿಎಸ್‌ಇ ಇದಕ್ಕೂ ಮೊದಲು ಮೌಲ್ಯಾಂಕನದ ಇಡೀ ಪ್ರಕ್ರಿಯೆಯನ್ನು ಜೂನ್‌ 11ರೊಳಗೆ ಪೂರ್ಣಗೊಳಿಸಬೇಕು ಮತ್ತು ಫಲಿತಾಂಶವನ್ನು ಜೂನ್ 20ರಂದು ಪ್ರಕಟಿಸಲಾಗುವುದು ಎಂದು ಪ್ರಕಟಿಸಿತ್ತು.

ಕೋವಿಡ್‌ ಕಾರಣದಿಂದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್‌ ಪ್ರಕ್ರಿಯೆ ಜಾರಿಯಲ್ಲಿರುವುದು ಹಾಗೂ ಶಿಕ್ಷಕರು ಮತ್ತು ಶಾಲೆ ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಸಿಬಿಎಸ್‌ಇ ಎಂದಿಗೂ ಶಿಕ್ಷಕರು, ಸಿಬ್ಬಂದಿ ಸುರಕ್ಷತೆಗೆ ಒತ್ತು ನೀಡಲಿದೆ. ವಿವಿಧ ರಾಜ್ಯಗಳಲ್ಲಿನ ಲಾಕ್‌ಡೌನ್‌ ಕಾರಣದಿಂದ ಅವಧಿ ವಿಸ್ತರಿಸಲಾಗಿದೆ. ಶಾಲೆಗಳು ಜೂನ್ 30ರ ಒಳಗೆ ಅಂಕಗಳ ಪಟ್ಟಿ ಕಳುಹಿಸಬೇಕು. ಸಿಬಿಎಸ್‌ಇ ರೂಪಿಸಿದ ಯೋಜನೆ ಅನ್ವಯ ಫಲಿತಾಂಶ ಸಮಿತಿಯು ಇತರೆ ವೇಳಾಪಟ್ಟಿಯನ್ನು ನಿಗದಿಪಡಿಸಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಾನ್ಯಂ ಭಾರಧ್ವಾಜ್‌ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು