ಗುರುವಾರ , ಮಾರ್ಚ್ 23, 2023
32 °C

ಜವಳಿ ಕ್ಷೇತ್ರಕ್ಕೆ ₹10,683 ಕೋಟಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಜವಳಿ ಕ್ಷೇತ್ರಕ್ಕೆ ₹10,683 ಕೋಟಿ ಮೊತ್ತದ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ (ಪಿಎಲ್‌ಐ) ಯೋಜನೆ ರೂಪಿಸಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಓದಿ: ಪಿಎಲ್ಐನಿಂದ ಉತ್ಪಾದನೆ ಏರಿಕೆ: ಪ್ರಧಾನಿ ಮೋದಿ

ಎಂಎಂಎಫ್ (ಮಾನವ ನಿರ್ಮಿತ ಫೈಬರ್) ಉಡುಪು, ಎಂಎಂಎಫ್‌ ಫ್ಯಾಬ್ರಿಕ್ಸ್ ಮತ್ತು ತಾಂತ್ರಿಕ ಜವಳಿ ಉತ್ಪನ್ನಗಳು ಸೇರಿದಂತೆ 10 ವಿಭಾಗಗಳನ್ನು ಪಿಎಲ್‌ಐ ಯೋಜನೆ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

2021–22ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹1.97 ಲಕ್ಷ ಕೋಟಿ ಪಿಲ್‌ಐ ಯೋಜನೆ ಅನುಷ್ಠಾನಗೊಳಿಸುವುದಾಗಿ ಉಲ್ಲೇಖಿಸಲಾಗಿತ್ತು. ಇದರ ಅಂಗವಾಗಿ ಜವಳಿ ಉದ್ಯಮಕ್ಕೂ ಯೋಜನೆ ರೂಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು