ಭಾನುವಾರ, ಮೇ 22, 2022
21 °C

ಪಿಎಂ–ಕಿಸಾನ್‌ ಯೋಜನೆ: ಬಂಗಾಳ ರೈತರಿಗೆ ಹಣ ನೀಡದ ಕೇಂದ್ರ –ಮಮತಾ ಬ್ಯಾನರ್ಜಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಲ್ನಾ(ಪಶ್ಚಿಮ ಬಂಗಾಳ): ‘ಅರ್ಹ ರೈತರನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿದ್ದರೂ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ರೈತರಿಗೆ ಪಿಎಂ–ಕಿಸಾನ್ ಯೋಜನೆಯಡಿ  ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.

ಇಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ರೈತರಿಗೆ ಹಣ ನೀಡುವುದನ್ನು ನಮ್ಮ ಸರ್ಕಾರ ನಿರಾಕರಿಸುತ್ತಿದೆ‘ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಟಿಎಂಸಿ ಸರ್ಕಾರ ರಾಜ್ಯದ ಪ್ರತಿ ರೈತರಿಗೆ ₹5 ಸಾವಿರ ಹಣ ಕೊಡುವ ಜತೆಗೆ, ಉಚಿತ ಬೆಳೆ ವಿಮೆಯ ಸೌಲಭ್ಯವನ್ನೂ ನೀಡಿದೆ‘ ಎಂದು ಪ್ರತಿಪಾದಿಸಿದರು.

ಪಿಎಂ–ಕಿಸಾನ್‌ ಸಮ್ಮಾನ್ ನಿಧಿ ಅಡಿ ಕೇಂದ್ರ ಕಳುಹಿಸಿದ್ದ 6 ಲಕ್ಷ ರೈತರ ಹೆಸರುಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿ, ಎರಡೂವರೆ ಲಕ್ಷ ರೈತರ ಹೆಸರನ್ನು ಆಯ್ಕೆ ಮಾಡಿ, ಆ ಪಟ್ಟಿಯನ್ನು ಪುನಃ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಇಲ್ಲಿವರೆಗೂ ಆ ರೈತರಿಗೆ ಹಣ ನೀಡಿಲ್ಲ‘ ಎಂದು ಮುಖ್ಯಮಂತ್ರಿ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು