ಗುರುವಾರ , ಮೇ 13, 2021
39 °C
ಪ್ರಗತಿಪರ ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ

ಕೋವಿಡ್ ಲಸಿಕಾ ಅಭಿಯಾನದಿಂದ ಖಾಸಗಿ ಕಂಪನಿಗಳಿಗೆ ಲಾಭ: ಪ್ರಗತಿಪರ ವೈದ್ಯರ ಆರೋಪ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ರೂಪಿಸಿದ್ದ ಕೋವಿಡ್‌ ಲಸಿಕಾ ಅಭಿಯಾನವನ್ನು ಖಾಸಗಿ ಕಂಪನಿಗಳಿಗೆ ಆದಾಯ ತಂದಕೊಡುವಂತಹ ಯೋಜನೆಯನ್ನಾಗಿಸುತ್ತಿದೆ‘ ಎಂದು ಪ್ರಗತಿಪರ ವೈದ್ಯರು ಮತ್ತು ವಿಜ್ಞಾನಿಗಳ ವೇದಿಕೆಯೊಂದು ಆರೋಪಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರೊಗ್ರೆಸ್ಸಿವ್‌ ಮೆಡಿಕೋಸ್‌ ಆ್ಯಂಡ್‌ ಸೈಂಟಿಸ್ಟ್‌ ಫೋರಂ, ‘ಕೇಂದ್ರ ಸರ್ಕಾರದ ಈ ನಡೆಯಿಂದ ಖಾಸಗಿ ಕಂಪನಿಗಳು ಮಾರುಕಟ್ಟೆಯಲ್ಲಿ ಕೋವಿಡ್ ಲಸಿಕೆಯ ದರವನ್ನು ನಿಯಂತ್ರಿಸುತ್ತಾ, ಕಂಪನಿಗಳ ಆದಾಯ ಹೆಚ್ಚಿಸಿಕೊಳ್ಳುವಂತೆ ಮಾಡಿದೆ‘ ಎಂದು ದೂರಿದೆ.

‘ಶೇ 50 ರಷ್ಟು ಡೋಸ್‌ಗಳಷ್ಟು ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕ ಲಸಿಕಾ ಅಭಿಯಾನವನ್ನೂ ಖಾಸಗಿಯವರಿಗೆ ಆದಾಯ ಮೂಲವನ್ನಾಗಿ ಮಾಡಿಕೊಟ್ಟಿದೆ‘ ಎಂದು ಈ ವೇದಿಕೆ ಟೀಕಿಸಿದೆ.

‘ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ನೀಡಿದ ಉಚಿತ ಲಸಿಕೆಯ ಭರವಸೆ ಕೇವಲ ಚುನಾವಣೆ ಗೆಲ್ಲುವವರೆಗೆ ಮಾತ್ರ ಎಂಬುದು ಕೇಂದ್ರದ ಈ ನಡೆಯಿಂದ ಖಚಿತವಾಗಿದೆ‘ ಎಂದು ಸಂಘಟನೆ ಹೇಳಿದೆ.

‘ಈಗಾಗಲೇ ಲಸಿಕೆ ಡೋಸ್‌ಗಳ ಕೊರತೆಯಿಂದಾಗಿ ರಾಜ್ಯದಲ್ಲಿ ಕಠಿಣ ಪರಿಸ್ಥಿತಿ ತಲೆದೋರಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಇಂಥ ಕೆಲಸದಿಂದಾಗಿ ರಾಜ್ಯ ಸರ್ಕಾರಗಳು ಉತ್ತಮ ಬೆಲೆಗೆ ಲಸಿಕೆ ಖರೀದಿಸಲು ಕಂಪನಿಗಳೊಂದಿಗೆ ಚೌಕಾಸಿಗೆ ಇಳಿಯಬೇಕಾಗುತ್ತದೆ. ತಮಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಪಡೆಯಲು ಬಿಡ್‌ ಮಾಡಬೇಕಾಗುತ್ತದೆ‘ ಎಂದು ಸಂಘಟನೆ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು