ಮಂಗಳವಾರ, ಡಿಸೆಂಬರ್ 6, 2022
21 °C

ನಿವೃತ್ತಿ ನಂತರದ ಪ್ರಯೋಜನಗಳಿಗಾಗಿ ಕೊಚ್ಚಾರ್‌ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಐಸಿಐಸಿಐ ಬ್ಯಾಂಕ್‌ನ ಸಿಇಒ ಹುದ್ದೆಯಿಂದ ಚಂದಾ ಕೊಚ್ಚಾರ್‌ ಅವರನ್ನು ವಜಾಗೊಳಿಸಿದ್ದು ಮೇಲ್ನೋಟಕ್ಕೆ ಊರ್ಜಿತ ಎಂದು ತೋರುತ್ತದೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್‌, ನಿವೃತ್ತಿ ನಂತರದ ಪ್ರಯೋಜಗಳನ್ನು ಕೋರಿ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದೆ.

2018ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ 6.90 ಲಕ್ಷ ಷೇರುಗಳ ವ್ಯವಹಾರವನ್ನು ನಡೆಸದಂತೆ ಮತ್ತು ಈಗ ನಡೆಸಿರುವ ವ್ಯವಹಾರಗಳ ಕುರಿತು ಮುಂದಿನ ಆರು ತಿಂಗಳಲ್ಲಿ ಅಫಿಡವಿಟ್‌ ಸಲ್ಲಿಸುವಂತೆಯೂ ನ್ಯಾಯಾಧೀಶ ಆರ್‌.ಐ. ಚಗ್ಲಾ ಅವರಿದ್ದ ಏಕಸದಸ್ಯ ಪೀಠವು ಚಂದಾ ಅವರಿಗೆ ನಿರ್ದೇಶಿಸಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.