ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರಾಜ್ಯ ಘಟಕಗಳ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆ ನಿರೀಕ್ಷೆ

ಪಕ್ಷದ ಸಂಘಟನೆಯಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ
Last Updated 21 ಆಗಸ್ಟ್ 2022, 14:27 IST
ಅಕ್ಷರ ಗಾತ್ರ

ನವದೆಹಲಿ: ಹಲವಾರು ರಾಜ್ಯಗಳ ಬಿಜೆಪಿ ಘಟಕಗಳ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ತರುವುದನ್ನು ಪಕ್ಷವು ಮುಂದುವರೆಸುವ ನಿರೀಕ್ಷೆ ಇದೆ.2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿಯುಪಕ್ಷದ ಸಂಘಟನೆಯಲ್ಲಿಯ ಸಮಸ್ಯೆಗಳನ್ನು ಮತ್ತು ಸದ್ಯ ತಲೆದೂರಿರುವ ರಾಜಕೀಯ ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಿದೆ ಎನ್ನಲಾಗಿದೆ.

ಬಿಜೆಪಿಯ ಸಂಸದೀಯ ಸಮಿತಿಯಿಂದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಕೈಬಿಡಲಾಗಿದೆ.ಕಳೆದ ವಾರವಷ್ಟೇ ಬಿಜೆಪಿಯು ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಛತ್ತೀಸಗಡ ರಾಜ್ಯಗಳಿಗೆ ರಾಜ್ಯ ಘಟಕಗಳ ಅಧ್ಯಕ್ಷರನ್ನು ನೇಮಿಸಿದೆ. ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆ ತಂದಿದೆ.ಅದರಂತೆ, ಉತ್ತರ ಪ್ರದೇಶಕ್ಕೆ ಹೊಸ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಿಸುವ ಮತ್ತು ಬಿಹಾರ ಬಿಜೆಪಿ ಘಟಕಕ್ಕೆ ಹೊಸ ಮುಖಗಳನ್ನು ತರುವ ನಿರೀಕ್ಷೆಯೂ ಇದೆ.

ಹಿಂದುಳಿದ ವರ್ಗಗಳನ್ನು ತಲುಪಲು ಯತ್ನಿಸುತ್ತಿರುವ ಬಿಜೆಪಿಯು ಇದೇ ಮೊದಲ ಬಾರಿಗೆ ಮೇಲ್ಜಾತಿ ಅಲ್ಲದವರಿಗೂ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಿದೆ. ‌

ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಲು ಬಿಜೆಪಿ ನಿರ್ಧರಿಸಿದೆ.‍ಪಕ್ಷದ ಪ್ರಮುಖ ನಾಯಕ ಸುನೀಲ್‌ ಬನ್ಸಲ್‌ ಅವರನ್ನು ಈ ಮೂರು ರಾಜ್ಯಗಳ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗಳು ಈ ರಾಜ್ಯಗಳಲ್ಲಿ ಕೆಲ ಬದಲಾವಣೆಯನ್ನು ಬಿಜೆಪಿ ಮಾಡಿಕೊಳ್ಳುವಂತೆ ಮಾಡಿವೆ.

ಈಶಾನ್ಯ ರಾಜ್ಯಗಳ ಬಿಜೆಪಿ ಪ್ರದೇಶ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಆಗಿದ್ದ ಅಜಯ್‌ ಜಮ್ವಾಲ ಅವರನ್ನು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ಬಿಜೆಪಿಗೆ ಅದೇ ಹುದ್ದೆಗೆ ನೇಮಿಸಲಾಗಿದೆ. ತೆಲಂಗಾಣದ ಮಂತ್ರಿ ಶ್ರೀನಿವಾಸಲು ಅವರನ್ನು ಪಂಜಾಬ್‌ನ ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ (ಸಂಘಟನೆ) ನೇಮಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT