ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹದ ನಂತರ ಸಮ್ಮತಿ ರಹಿತ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್‌

Last Updated 26 ಆಗಸ್ಟ್ 2021, 11:40 IST
ಅಕ್ಷರ ಗಾತ್ರ

ರಾಯಪುರ: ವ್ಯಕ್ತಿಯೊಬ್ಬರ ಮೇಲೆ ದಾಖಲಾಗಿದ್ದ ವೈವಾಹಿಕ ಅತ್ಯಾಚಾರ ಪ್ರಕರಣವನ್ನು ಚತ್ತೀಸಗಢ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಕಾನೂನಾತ್ಮಕವಾಗಿ ವಿವಾಹವಾದ ಬಳಿಕ ಪತ್ನಿಯ ಮೇಲೆ ಪತಿ ನಡೆಸುವ ಬಲತ್ಕಾರ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ ಎಂದು ಹೈಕೋರ್ಟ್‌ ಹೇಳಿದೆ.

'ವ್ಯಕ್ತಿಯೊಬ್ಬ ಸ್ವಂತ ಪತ್ನಿಯ ಜೊತೆ ಕೂಡಿದರೆ ಅಥವಾ ಲೈಂಗಿಕ ಕ್ರಿಯೆ ನಡೆಸಿದರೆ, ಪತ್ನಿಯು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅದು ಅತ್ಯಾಚಾರವಾಗುವುದಿಲ್ಲ. ಈ ಪ್ರಕರಣದಲ್ಲಿ, ಆರೋಪಿಯು ದೂರುದಾರರನ್ನು ಕಾನೂನಾತ್ಮಕವಾಗಿ ವಿವಾಹವಾಗಿದ್ದಾರೆ. ಹಾಗಾಗಿ ಆರೋಪಿಯು ದೂರುದಾರರ ಜೊತೆ ಕೂಡುವುದು ಅಥವಾ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ನಡೆಸುವುದನ್ನು ಅತ್ಯಾಚಾರ ಪ್ರಕರಣ ಎನ್ನಲು ಸಾಧ್ಯವಿಲ್ಲ. ಅದು ಬಲತ್ಕಾರ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿದ್ದರೂ ಅತ್ಯಾಚಾರವೆಂದೆನಿಸುವುದಿಲ್ಲ' ಎಂದು ನ್ಯಾ. ಎನ್.ಕೆ. ಚಂದ್ರವಂಶಿ ಹೇಳಿದ್ದಾರೆ.

ಇಚ್ಛೆಗೆ ವಿರುದ್ಧವಾಗಿ ಪತಿಯು ತನ್ನ ಖಾಸಗಿ ಭಾಗದಲ್ಲಿ ಬೆರಳು ಮತ್ತು ಮೂಲಂಗಿಯನ್ನು ತೂರಿಸುವ ಮೂಲಕ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದರು.

ಮದುವೆಯಾದ ಕೆಲವು ದಿನಗಳ ಬಳಿಕ ಪತಿಯು ವರದಕ್ಷಿಣೆ ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು ಎಂದು 'ಲೈವ್‌ಲಾ.ಇನ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT