ಸೋಮವಾರ, ಏಪ್ರಿಲ್ 12, 2021
31 °C

ಕೋಬ್ರಾ ಕಮಾಂಡೊ ರಾಕೇಶ್ವರ ಸಿಂಗ್ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಯಪುರ: ನಕ್ಸಲರು ಅಪಹರಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೋಬ್ರಾ ಕಮಾಂಡೊ ರಾಕೇಶ್ವರ್ ಸಿಂಗ್ ಮಿನ್ಹಾಸ್‌ ಅವರನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.

ಪೊಲೀಸರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಮಿನ್ಹಾಸ್‌ ಅವರು 210ನೇ ಕೋಬ್ರಾ ತುಕಡಿಯ ಸದಸ್ಯರಾಗಿದ್ದಾರೆ. ‘ಕೋಬ್ರಾ’ ಎಂಬುದು ಸಿಆರ್‌ಪಿಎಫ್‌ನ ಮುಂಚೂಣಿ ಘಟಕವಾಗಿದೆ.

ಏಪ್ರಿಲ್‌ 3ರಂದು ರಾಯಪುರ ಮತ್ತು ಬಿಜಾಪುರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದರು. ಅದೇ ದಿನದಿಂದ ಮಿನ್ಹಾಸ್ ನಾಪತ್ತೆಯಾಗಿದ್ದರು. ಬಳಿಕ ಇವರನ್ನು ಅಪಹರಿಸಲಾಗಿದೆ ಎಂದು ನಕ್ಸಲರು ಹೇಳಿಕೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು