ಮಂಗಳವಾರ, ಮಾರ್ಚ್ 2, 2021
21 °C

ಯಾವ ನಿಯಮಗಳಡಿ ಮಲ್ಯ ವಿರುದ್ಧ ಲುಕ್‌ ಔಟ್‌ ನೋಟಿಸ್ ಜಾರಿಯಾಗಿದೆ? ಮಾಹಿತಿ ಆಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಎರಡು ಪ್ರತ್ಯೇಕ ಲುಕ್‌ಔಟ್ ನೋಟಿಸ್ ಅನ್ನು ಯಾವ ನಿಯಮಗಳ ಅನುಸಾರ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಸಿಬಿಐಗೆ ನಿರ್ದೇಶಿಸಿದೆ.

ಬ್ಯಾಂಕ್‌ಗಳಿಂದ ₹ 9000 ಕೋಟಿ ಸಾಲ ಪಡೆದು ಸುಸ್ತಿದಾರನಾಗಿರುವ ಮಲ್ಯ ವಿರುದ್ಧ 2015ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಲಾಗಿತ್ತು.

ಸಿಬಿಐ ನವೆಂಬರ್ ತಿಂಗಳು ನೀಡಿದ್ದ ಎರಡನೇ ನೋಟಿಸ್‌ನಲ್ಲಿ  ಮಲ್ಯ ಚಲನವಲನಗಳ ಕುರಿತು ಮಾಹಿತಿ ನೀಡಬೇಕು ಎಂದು ಎಲ್ಲ ವಿಮಾನನಿಲ್ದಾಣಗಳ ಆಡಳಿತಗಳಿಗೆ ಸೂಚಿಸಿತ್ತು. ಇದಕ್ಕೂ ಹಿಂದೆ ಜಾರಿ ಮಾಡಿದ್ದ ನೋಟಿಸ್‌ನಲ್ಲಿ ಮಲ್ಯ ದೇಶದಿಂದ ಪಲಾಯನ ಮಾಡಲು ಸಂಚು ನಡೆಸಿದ ಸಂದರ್ಭದಲ್ಲಿ ಬಂಧಿಸಲು ಅವಕಾಶ ಕೋರಿ ನೋಟಿಸ್‌ ನೀಡಲಾಗಿತ್ತು.

ಪುಣೆ ಮೂಲದ ಆರ್‌ಟಿಇ ಕಾರ್ಯಕರ್ತ ವಿಹಾರ ದುರ್ವೆ ಅವರು ಸಲ್ಲಿಸಿದ್ದ ಅರ್ಜಿ ಆಧರಿಸಿ ಆಯೋಗವು ಈ ಸೂಚನೆಯನ್ನು ಸಿಬಿಐಗೆ ನೀಡಿದೆ. ಸಿಬಿಐ ಈ ಮೊದಲು ಅರ್ಜಿದಾರರಿಗೆ ಮಾಹಿತಿ ನೀಡಲು ನಿರಾಕರಿಸಿತ್ತು.

ಮಾಹಿತಿ ನಿರಾಕರಣೆಗೆ ಆರ್‌ಟಿಐ ಕಾಯ್ದೆಯ 8(1) (ಎಚ್‌) ವಿಧಿಯನ್ನು ಉಲ್ಲೇಖಿಸಿತ್ತು. ತನಿಖೆಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹಹುದಾದ ಮಾಹಿತಿ ಬಹಿರಂಗ ಪಡಿಸದಿರಲು ಈ ವಿಧಿ ಅವಕಾಶ ಕಲ್ಪಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು