ಇಂದೋರ್: ಕಾಮಿಡಿಯನ್ ಮುನಾವರ್ ಫಾರುಕಿ ಅವರನ್ನು ಶನಿವಾರ ತಡರಾತ್ರಿ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ಹಿಂದೂಗಳ ಭಾವನೆಗೆ ಧಕ್ಕೆ ಪಡಿಸಿದ ಆರೋಪದಡಿ ಮುನಾವರ್ ಫಾರುಕಿ ಅವರನ್ನು ಜನವರಿ 1 ರಂದು ಬಂಧಿಸಲಾಗಿತ್ತು. ಫಾರೂಕಿ 35 ದಿನಗಳ ಕಾಲ ಜೈಲಿನಲ್ಲಿದ್ದರು.

ಜನವರಿ 28 ರಂದು ಮಧ್ಯಪ್ರದೇಶ ಹೈಕೋರ್ಟ್ ಫಾರುಕಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಸುಪ್ರೀಂಕೋರ್ಟ್ ಶುಕ್ರವಾರ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೂ, ಬಿಡುಗಡೆ ಮಾಡಿರಲಿಲ್ಲ. ಬಳಿಕ, ಇಂದೋರ್ನ ಮುಖ್ಯ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಅವರು ಜಾಮೀನು ನೀಡಿರುವ ಬಗ್ಗೆ ಸುಪ್ರೀಂ ಕೋರ್ಟ್ನ ವೆಬ್ಸೈಟ್ ನೋಡುವಂತೆ ಜೈಲು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದ ಬಳಿಕವೇ ಮುನಾವರ್ ಅವರನ್ನು ಬಿಡುಗಡೆಗೊಳಿಸಲಾಯಿತು.

‘ಸಿಜೆಎಂ ನಮಗೆ ಶನಿವಾರ ರಾತ್ರಿ ಕರೆ ಮಾಡಿ, ಮುನಾವರ್ನನ್ನು ಬಿಡುಗಡೆಗೊಳಿಸುವಂತೆ ಸೂಚಿಸಿದರು. ಸುಪ್ರೀಂಕೋರ್ಟ್ನ ಜಾಮೀನು ಆದೇಶ ಸಿಕ್ಕಿಲ್ಲದಿದ್ದರೆ, ನ್ಯಾಯಾಲಯ ವೆಬ್ಸೈಟ್ನಲ್ಲಿರುವ ಆದೇಶವನ್ನು ಪರಿಶೀಲಿಸುವಂತೆ ಹೇಳಿದರು’ ಎಂದು ಮಧ್ಯಪ್ರದೇಶದ ಕೇಂದ್ರ ಕಾರಾಗೃಹದ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಭಂಗ್ರೆ ತಿಳಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಫಾರುಕಿ ಅವರು, ‘ನನಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ನನಗೆ ನ್ಯಾಯ ದೊರೆಯುವ ಆಶಾಭಾವ ಇದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.