ಭಾನುವಾರ, ಅಕ್ಟೋಬರ್ 25, 2020
23 °C

ಅತ್ಯಾಚಾರ ಪ್ರಕರಣ ನಿರಾಕರಣೆ:ಯೋಗಿ ವಿರುದ್ಧ ರಾಹುಲ್ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಪೊಲೀಸರು ಯಾರ ಮೇಲೂ ಅತ್ಯಾಚಾರ ಆಗಿಲ್ಲ ಎನ್ನುತ್ತಾರೆ. ಏಕೆಂದರೆ, ಅತ್ಯಾಚಾರಕ್ಕೀಡಾದ ಆಕೆ ಅವರಿಗೆ ಯಾರೂ ಅಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಅನೇಕ ಭಾರತೀಯರು ದಲಿತರು, ಮುಸಲ್ಮಾನರು ಮತ್ತು ಬುಡಕಟ್ಟು ಜನರನ್ನು ಮನುಷ್ಯರೆಂದೇ ಭಾವಿಸಿಲ್ಲ. ಇದು, ನಾಚಿಕೆಗೇಡಿನ ಸಂಗತಿ’ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಹರಿಹಾಯ್ದಿದ್ದಾರೆ.

ಯಾರ ಮೇಲೂ ಅತ್ಯಾಚಾರ ಆಗಿಲ್ಲ ಎಂದು ಹೇಳಿಕೆ ನೀಡಲು, ಅವರು ಹಾಗೂ ಇನ್ನೂ ಅನೇಕ ಭಾರತೀಯರಿಗೆ ದಲಿತ ಮಹಿಳೆ ‘ಯಾರೂ ಅಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಮಾಧ್ಯಮ ವರದಿಯೊಂದನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು, ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ವರದಿ ಅಗುತ್ತಿದ್ದರೂ, ಪೊಲೀಸರು ಅಂತಹ ಪ್ರಕರಣಗಳು ನಡೆದೇ ಇಲ್ಲ ಎಂದು ಏಕೆ ನಿರಾಕರಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಹಾಥರಸ್‌ನಲ್ಲಿ  19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಆರೋಪವಿದೆ. ಮಹಿಳೆ ನಂತರ ದೆಹಲಿಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು