ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ನೌಕಾಪಡೆಗೆ ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ 6 ಕ್ಷಿಪಣಿ ಹಡಗು

Last Updated 1 ಏಪ್ರಿಲ್ 2023, 8:07 IST
ಅಕ್ಷರ ಗಾತ್ರ

ಕೊಚ್ಚಿ: ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್‌ ಭಾರತೀಯ ನೌಕಾಪಡೆಗೆ ಆರು ಮುಂದಿನ ಪೀಳಿಗೆಯ ಕ್ಷಿಪಣಿ ಹಡಗುಗಳನ್ನು(ಎನ್‌ಜಿಎಮ್‌ವಿ) ₹9,805 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, 2027 ರಿಂದ ಹಡಗುಗಳು ವಿತರಣೆಯನ್ನು ಪ್ರಾರಂಭಿಸಲಿದೆ.

ಈ ಒಪ್ಪಂದವು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನಾ ವಲಯಕ್ಕೆ ನಮ್ಮ ಪ್ರವೇಶವಾಗಿದೆ ಎಂದು ಕೇರಳ ರಾಜ್ಯದ ಅಡಿಯಲ್ಲಿರುವ ಶಿಪ್‌ಯಾರ್ಡ್‌ ತಿಳಿಸಿದೆ.

‘ಶತ್ರುಗಳ ಯುದ್ಧನೌಕೆ ವಿರುದ್ಧ, ವ್ಯಾಪಾರ ಮತ್ತು ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಆಕ್ರಮಣಕಾರಿ ಸಾಮರ್ಥ್ಯವನ್ನು ಒದಗಿಸುವುದು ಹಡಗುಗಳ ಪ್ರಾಥಮಿಕ ಪಾತ್ರವಾಗಿರುತ್ತದೆ’ ಎಂದು ಕೊಚ್ಚಿನ್ ಶಿಪ್‌ಯಾರ್ಡ್‌ ಪ್ರಕಟಣೆಯಲ್ಲಿ ತಿಳಿಸಿದೆ. ಹಡಗುಗಳ ವಿತರಣೆಯು ಮಾರ್ಚ್ 2027 ರಿಂದ ಪ್ರಾರಂಭವಾಗಲಿದೆ.

‘ಎನ್‌ಜಿಎಮ್‌ವಿಗಳು ರಹಸ್ಯ ಭೇದಿಸುವ ಹೆಚ್ಚಿನ ವೇಗ ಮತ್ತು ಆಕ್ರಮಣಕಾರಿ ಸಾಮರ್ಥ್ಯವನ್ನು ಒಳಗೊಂಡಿರುವ ಭಾರೀ ಶಸ್ತ್ರಸಜ್ಜಿತ ಯುದ್ಧ ನೌಕೆಗಳಾಗಿವೆ. ಈ ಹಡಗುಗಳು ಕಡಲ ಕಾರ್ಯಾಚರಣೆಗಳು ಹಾಗೂ ಯುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸಮರ್ಥ ಮತ್ತು ಶತ್ರು ಹಡಗುಗಳಿಗೆ ವಿಶೇಷವಾಗಿ ಜಲಸಂಧಿಯಂತಹ ನಿರ್ಣಾಯಕ ಜಲಮಾರ್ಗಗಳಲ್ಲಿ (ಚಾಕ್‌ ಪಾಯಿಂಟ್‌) ತಡೆಹಾಕಲು ಪ್ರಬಲ ಸಾಧನವಾಗಿದೆ’ ಎಂದು ಅದು ತಿಳಿಸಿದೆ.

ಈ ಹಡಗುಗಳನ್ನು ಸ್ಥಳೀಯ ನೌಕಾ ರಕ್ಷಣಾ ಕಾರ್ಯಾಚರಣೆಗಳಿಗೆ ಮತ್ತು ಕಡಲಾಚೆಯ ಅಭಿವೃದ್ಧಿ ಪ್ರದೇಶದ ಸಮುದ್ರದ ರಕ್ಷಣೆಗೆ ಬಳಸಿಕೊಳ್ಳಲಾಗುವುದು ಎಂದು ಶಿಪ್‌ಯಾರ್ಡ್‌ ತಿಳಿಸಿದೆ.

ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಯಶಸ್ವಿಯಾಗಿ ತಲುಪಿಸಿದ ನಂತರ ಎನ್‌ಜಿಎಂವಿಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲು ಉತ್ಸುಕವಾಗಿದೆ ಎಂದು ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಸಿಎಂಡಿ ಮಧು ಎಸ್‌ ನಾಯರ್‌ ತಿಳಿಸಿದ್ದಾರೆ.

ಇವುಗಳ ಜೊತೆಗೆ, ನೌಕಾಪಡೆಗಾಗಿ ಎಂಟು ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗುಗಳನ್ನು ನಿರ್ಮಿಸುತ್ತಿದ್ದು, ಈ ಹಡಗುಗಳ ನಿರ್ಮಾಣವು ವಿವಿಧ ಹಂತಗಳಲ್ಲಿದೆ ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT