ಸೋಮವಾರ, ಜನವರಿ 18, 2021
26 °C

ಹಿಂದೂ ದೇವತೆಗಳ ಬಗ್ಗೆ ಅವಹೇಳನ: ಐವರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಂದೋರ್‌: ಹಿಂದೂ ದೇವತೆಗಳು ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿದ ಆರೋಪದಡಿ ಗುಜರಾತ್‌ ಮೂಲದ ಹಾಸ್ಯ ಕಲಾವಿದ ಮುನಾವರ್‌ ಫರೂಖಿ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಶನಿವಾರ ಹೇಳಿದರು.

‘ಶುಕ್ರವಾರ ಇಂದೋರ್‌ನ 56 ದುಕಾನ್‌ ಪ್ರದೇಶದಲ್ಲಿ ಇರುವ ಕೆಫೆಯೊಂದರಲ್ಲಿ ಹಾಸ್ಯ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಬಿಜೆಪಿ ಶಾಸಕಿಯಾದ ಮಾಲಿನಿ ಲಕ್ಷ್ಮಣ್‌ ಸಿಂಗ್‌ ಗೌರ್‌ ಅವರ ಪುತ್ರ ಏಕಲವ್ಯ ಸಿಂಗ್‌ ಗೌರ್‌ ಹಾಗೂ ಅವರ ಸ್ನೇಹಿತರು ಪ್ರೇಕ್ಷಕರಾಗಿ ತೆರಳಿದ್ದರು. ದೇವೆತೆಗಳು ಹಾಗೂ ಅಮಿತ್‌ ಶಾ ಅವರ ಬಗ್ಗೆ ಮುನಾವರ್‌ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಸಂದರ್ಭದಲ್ಲಿ ಅದನ್ನು ಗೌರ್‌ ಖಂಡಿಸಿದ್ದರು. ಜೊತೆಗೆ ಕಾರ್ಯಕ್ರಮವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದರು.’

‘ಮುನಾವರ್‌ ಹಾಗೂ ಇಂದೋರ್‌ ಮೂಲದ ನಾಲ್ಕು ಜನರ ವಿರುದ್ಧ ಶುಕ್ರವಾರ ರಾತ್ರಿಯೇ ಗೌರ್‌ ಲಿಖಿತ ದೂರು ಸಲ್ಲಿಸಿದ್ದರು. ಜೊತೆಗೆ ಕಾರ್ಯಕ್ರಮದ ವಿಡಿಯೊವೊಂದನ್ನೂ ಗೌರ್‌ ಸಲ್ಲಿಸಿದ್ದರು. ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಐವರನ್ನೂ ನಂತರ ಬಂಧಿಸಲಾಯಿತು’ ಎಂದು  ತುಕೊಗಂಜ್‌ ಪೊಲೀಸ್‌ ಠಾಣೆಯ ಕಮಲೇಶ್‌ ಶರ್ಮಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು