ಶನಿವಾರ, ಆಗಸ್ಟ್ 13, 2022
26 °C

ಸಾಮಾನ್ಯ ಜನರಿಗೆ ಹೊರೆಯಾದ ಸಿಲಿಂಡರ್ ಮರುಭರ್ತಿ: ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಡುಗೆ ಅನಿಲ ಏರಿಕೆಯಿಂದ ಸಾಮಾನ್ಯ ಜನರು ಗೃಹ ಬಳಕೆಯ ಒಂದು ಮರುಭರ್ತಿ ಸಿಲಿಂಡರ್‌ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. 

ಮಾಧ್ಯಮ ವರದಿ ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , 2021–22ರಲ್ಲಿ 3.9 ಕೋಟಿ ಗ್ರಾಹಕರಿಗೆ ಮರುಭರ್ತಿ ಸಿಲಿಂಡರ್‌ ಪಡೆಯಲು ಸಾಧ್ಯವಾಗಿಲ್ಲ. 2016ರಲ್ಲಿ ಚಾಲನೆ ನೀಡಿದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ಆ.10 ರಂದು ಬಿಡುಗಡೆಗೊಂಡ ಉಜ್ವಲ್ 2 ಯೋಜನೆಗೆ ತೆರಿಗೆದಾರರ ಹಣವನ್ನು ಜಾಹೀರಾತಿಗಾಗಿ ಮತ್ತೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

’ಅಡುಗೆ ಅನಿಲ ಏರಿಕೆಯಿಂದ ಪ್ರಸ್ತುತ ಸಿಲಿಂಡರ್ ಭರ್ತಿಗೆ ಒಂದು ಸಾವಿರ ವೆಚ್ಚವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತರು ಮತ್ತು ಬಡವರಿಗೊಂದು ಭಾರತ ಸೃಷ್ಟಿಸಿದ್ದಾರೆ‘ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು