ಶನಿವಾರ, ನವೆಂಬರ್ 26, 2022
23 °C
ಧ್ವಜ ಕಟ್ಟುವ ವಿಚಾರವಾಗಿ ಎರಡು ಸಮುದಾಯಗಳ ಜನರ ನಡುವೆ ಜಗಳ

ಗುಜರಾತ್‌| ಧಾರ್ಮಿಕ ಧ್ವಜ ಕಟ್ಟುವ ವಿಚಾರವಾಗಿ ಗಲಭೆ: 36 ಮಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ವಡೋದರ: ‘ಧಾರ್ಮಿಕ ಧ್ವಜ ಕಟ್ಟುವ ವಿಚಾರವಾಗಿ ಗುಜರಾತ್‌ನ ವಡೋದರ ಜಿಲ್ಲೆಯ ಸಾವ್ಲಿ ನಗರದ ಧಾಮಿಜಿ ಕಾ ಡೇರಾ ಪ್ರದೇಶದಲ್ಲಿ ಎರಡು ಸಮುದಾಯಗಳ ಜನರ ನಡುವೆ ಘರ್ಷಣೆ ನಡೆದಿದ್ದು, ಈ ಸಂಬಂಧ 36 ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. 

‘ಸಮುದಾಯವೊಂದಕ್ಕೆ ಸೇರಿದ ಜನ ವಿದ್ಯುತ್‌ ಕಂಬಕ್ಕೆ ಧ್ವಜ ಕಟ್ಟಿದ್ದರು. ಅದರ ಪಕ್ಕದಲ್ಲೇ ಮತ್ತೊಂದು ಸಮುದಾಯಕ್ಕೆ ಸೇರಿದ ಗುಂಪು ಧ್ವಜ ಕಟ್ಟಲು ಮುಂದಾಗಿತ್ತು. ಈ ವಿಚಾರವಾಗಿ ಉಭಯ ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಎರಡೂ ಸಮುದಾಯದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ವಾಹನ ಮತ್ತು ಅಂಗಡಿಯೊಂದಕ್ಕೆ ಹಾನಿಯಾಗಿದೆ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ಎ.ಆರ್‌.ಮಹಿದಾ ಮಾಹಿತಿ ನೀಡಿದ್ದಾರೆ. 

‘ಶನಿವಾರ ರಾತ್ರಿ ಉಭಯ ಗುಂಪುಗಳು ದೂರು ದಾಖಲಿಸಿದ್ದವು. ಅದರ ಆಧಾರದಲ್ಲಿ 43 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಈವರೆಗೆ ಉಭಯ ಸಮುದಾಯಕ್ಕೆ ಸೇರಿದ ಒಟ್ಟು 36 ಮಂದಿಯನ್ನು ಬಂಧಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಪರಿಸ್ಥಿತಿ ಈಗ ತಹಬದಿಗೆ ಬಂದಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು