ಮಂಗಳವಾರ, ಸೆಪ್ಟೆಂಬರ್ 21, 2021
21 °C

ಮಾಧ್ಯಮ ಸಂಸ್ಥೆಗಳ ಮೇಲೆ ಐ.ಟಿ ದಾಳಿ: ಸಂಪಾದಕರ ಮಂಡಳಿ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಸರ್ಕಾರಿ ಸಂಸ್ಥೆಗಳನ್ನು ‘ದಬ್ಬಾಳಿಕೆಯ ಅಸ್ತ್ರ’ವಾಗಿ ಬಳಸಲಾಗುತ್ತಿದೆ ಎಂದು ಭಾರತೀಯ ಸಂಪಾದಕರ ಮಂಡಳಿ ಕಳವಳ ವ್ಯಕ್ತಪಡಿಸಿದೆ.

ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ‘ದೈನಿಕ್‌ ಭಾಸ್ಕರ್’ನ ಕಚೇರಿಗಳ ಮೇಲೆ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಬೆಳವಣಿಗೆಯ ಹಿಂದೆಯೇ ಮಂಡಳಿ ಈ ಹೇಳಿಕೆ ನೀಡಿದೆ.

ದೈನಿಕ್‌ ಭಾಸ್ಕರ್ ಮತ್ತು ಲಖನೌ ಮೂಲದ ಸ್ವತಂತ್ರ ಸುದ್ದಿ ವಾಹಿನಿ ಭಾರತ್ ಸಮಾಚಾರ್ ಕಚೇರಿಗಳ ಮೇಲೆ ನಡೆದ ಐ.ಟಿ ದಾಳಿ ಬಗ್ಗೆ ಭಾರತೀಯ ಸಂಪಾದಕರ ಮಂಡಳಿ (ಇಜಿಐ) ಆತಂಕ ವ್ಯಕ್ತಪಡಿಸಿದೆ.

ಈ ಕುರಿತ ಹೇಳಿಕೆಯಲ್ಲಿ ಇಜಿಐ, ‘ಕೋವಿಡ್–19 ಪಿಡುಗಿನ ಸಾವುಗಳ ಕುರಿತ ವರದಿಗಳ ನಂತರ ಈ ದಾಳಿ ನಡೆದಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಸಂಪಾದಕ ಓಂ ಗೌರ್‌ ಅವರು ಇತ್ತೀಚಿಗೆ ವೆಬಿನಾರ್‌ನಲ್ಲಿ, ಸರ್ಕಾರಿ ಇಲಾಖೆಗಳಿಂದ ಬರಬೇಕಾದ ಜಾಹೀರಾತು ಪ್ರಮಾಣವು ಕಡಿಮೆಯಾಗಿರುವುದಾಗಿ ತಿಳಿಸಿದ್ದರು‘ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೈನಿಕ್‌ ಭಾಸ್ಕರ್‌ ಮಾಧ್ಯಮ ಸಮೂಹದ ಮೇಲೆ ಐಟಿ ದಾಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು