ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿ–23’ ಗುಂಪಿನ ಸದಸ್ಯರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ?

Last Updated 21 ಮಾರ್ಚ್ 2022, 20:40 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷಕ್ಕೆ ಸಮಗ್ರ ನಾಯಕತ್ವ ಅಗತ್ಯ ಎಂಬ ಜಿ–23 ಗಂಪಿನ ಬೇಡಿಕೆಯ ಹಿಂದೆಯೇ, ಪಕ್ಷದ ನೀತಿ, ನಿರ್ಣಾಯಕ ಸಮಿತಿಗಳಲ್ಲಿ ಈ ಗುಂಪಿನ ಕೆಲ ನಾಯಕರು ಸ್ಥಾನ ಪಡೆಯುವ ಸಂಭವವಿದೆ.

ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾದ ಹಿಂದೆಯೇ ಜಿ–23 ಗುಂಪಿನ ನಾಯಕರು, ಪಕ್ಷದ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಹರಿಹಾಯ್ದಿದ್ದರು.

ಪಕ್ಷದ ಮೂಲಗಳ ಪ್ರಕಾರ, ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿರುವ ಈ ಗುಂಪಿನಸದಸ್ಯರು, ಪಕ್ಷದ ಕೆಲ ಆಯಕಟ್ಟಿನ ಸ್ಥಾನಗಳಿಂದ ರಾಹುಲ್‌ ಗಾಂಧಿ ನಿಷ್ಠರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯವಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲ, ಪ್ರಧಾನ ಕಾರ್ಯದರ್ಶಿ ಅಜಯ್‌ ಮೆಕೆನ್ ಅವರನ್ನು ಗುರಿಯಾಗಿಸಿದ್ದಾರೆ.

ಭಿನ್ನಮತೀಯರನ್ನು ಶಾಂತಗೊಳಿಸಲು ಇವರಲ್ಲಿ ಒಂದಿಬ್ಬರನ್ನು ಬದಲಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷ ಬಲಪಡಿಸಬೇಕು ಮತ್ತು ಸಮಗ್ರ ನಾಯಕತ್ವ ಇರಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಸಂಧಾನ ಮಾರ್ಗ ಹುಡುಕಲು ಕಾಂಗ್ರೆಸ್‌ ನಾಯಕತ್ವ ಚಿಂತನೆ ನಡೆದಿದೆ.

2024ರ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಕೆಲ ಸಮಾನ ಮನಸ್ಕ ಪಕ್ಷಗಳ ಜೊತೆಗೆ ಚರ್ಚೆ ನಡೆಸಬೇಕು ಎಂದು ಈ ಗುಂಪು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT