ಶನಿವಾರ, ಆಗಸ್ಟ್ 13, 2022
24 °C

ಹೋಮಿಯೊಪಥಿ ಮಂಡಳಿ ರಚನೆ ವಿಳಂಬ: ಕಾಂಗ್ರೆಸ್ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೋಮಿಯೊಪಥಿ ಕೇಂದ್ರೀಯ ಮಂಡಳಿ ರಚಿಸುವಲ್ಲಿ ಕೇಂದ್ರ ಸರ್ಕಾರ ತೀರಾ ವಿಳಂಬ ಮಾಡುತ್ತಿದೆ.  ಇದು, ಆರ್‌ಬಿಐ ಮತ್ತು ಯುಜಿಸಿ ವಿಷಯದಲ್ಲಿ ಮಾಡಿದಂತೆ ಮಂಡಳಿಯ ಸ್ವಾಯತ್ತೆಯನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.

ಕೇಂದ್ರ ಹೋಮಿಯೊಪಥಿ ಮಂಡಳಿ ರಚನೆಗೆ ಅವಧಿಯನ್ನು ವರ್ಷ ವಿಸ್ತರಿಸಲು ಅವಕಾಶ ಕೋರುವ ‘ಹೋಮಿಯೊಪಥಿ ಕೇಂದ್ರೀಯ ಮಂಡಳಿ (ತಿದ್ದುಪಡಿ) ಕಾಯ್ದೆ 2020’ ಮಸೂದೆಯನ್ನು ಶುಕ್ರವಾರ ಮಂಡಿಸಲಾಯಿತು. 

ರಾಜ್ಯಸಭೆಯಲ್ಲಿ ಚರ್ಚೆ ಆರಂಭಿಸಿದ ಕಾಂಗ್ರೆಸ್‌ ನಾಯಕ ರಿಪುನ್ ಬೊರಾ, ‘ಮಂಡಳಿ ರಚಿಸಲು ಮೂರು ವರ್ಷ ವಿಳಂಬವೇಕೆ? ಈಗ ಮಂಡಳಿ ಆಯುಷ್ ಇಲಾಖೆ ಸುಪರ್ದಿಯಲ್ಲಿದೆ. ಈ ಮೂಲಕ ಅದರ ಸ್ವಾಯತ್ತೆಯನ್ನು ಕಸಿದುಕೊಳ್ಳಲಾಗಿದೆ’ ಎಂದು ಅರೋಪಿಸಿದರು.

ಕೇಂದ್ರ ಸರ್ಕಾರ 2018ರಲ್ಲಿ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ನಿರ್ದೇಕರ ಮಂಡಳಿಯನ್ನು ರಚಿಸಿತ್ತು. ಹೋಮಿಯೊಪಥಿ ಕಾಲೇಜುಗಳ ಸ್ಥಾಪನೆಗೆ ಮಂಡಳಿ ಲಂಚ ಪಡೆಯುತ್ತಿದೆ ಎಂಬ ಆರೋಪಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು