ಬುಧವಾರ, ಜೂನ್ 16, 2021
27 °C
ಹೃದಯಾಘಾತದಿಂದ ಸಾವು; ಕಾಂಗ್ರೆಸ್ ನಾಯಕರ ಸಂತಾಪ

ಕೇರಳ: ನಿಲಂಬೂರು ಕ್ಷೇತ್ರದ ಯುಡಿಎಫ್‌ ಅಭ್ಯರ್ಥಿ ನಿಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮಲ್ಲಪ್ಪುರಂ(ಕೇರಳ): ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷ ಯುಡಿಎಫ್‌ ಮೈತ್ರಿಕೂಟದ ನಿಲಂಬೂರು ಕ್ಷೇತ್ರದ ಅಭ್ಯರ್ಥಿ ವಿ.ವಿ.ಪ್ರಕಾಶ್ (56) ಅವರು ಗುರುವಾರ ಮುಂಜಾನೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಲ್ಲಪ್ಪುರಂ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿ.ವಿ.ಪ್ರಕಾಶ್ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟದಿಂದ ನಿಲಂಬೂರು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರಿಗೆ ಕೆಲವು ತಿಂಗಳುಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗೆ (ಆಂಜಿಯೋ ಪ್ಲಾಸ್ಟಿ) ಒಳಗಾಗಿದ್ದರು.

ಪ್ರಕಾಶ್ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ, ವಿವಿಧ ವಿರೋಧ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.

‘ಮಲ್ಲಪ್ಪುರಂ ಡಿಸಿಸಿ ಅಧ್ಯಕ್ಷ ಮತ್ತು ಯುಡಿಎಫ್‌ನ ನಿಲಂಬೂರು ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಅವರ ಅಕಾಲಿಕ ನಿಧನ ವಿಷಾದನೀಯ. ಪರಿಶ್ರಮದಿಂದೊಂದಿಗೆ ಪಕ್ಷಕ್ಕಾಗಿ ದುಡಿಯುತ್ತಿದ್ದ ಪ್ರಾಮಾಣಿಕ ಕಾರ್ಯಕರ್ತ ಅವರು. ಸದಾ ಜನರ ಸೇವೆಗೆ ಮುಂದಾಗುತ್ತಿದ್ದವರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು