ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಜಿಡಿಪಿ ಮತ್ತು ನಿರುದ್ಯೋಗದ ವ್ಯತಿರಿಕ್ತ ಅಂಕಿ ಅಂಶಗಳು ಹಾಗೂ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿಗಳ ಕೊರತೆಯನ್ನು ಎತ್ತಿಹಿಡಿದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ- ಪ್ರಧಾನ ಮಂತ್ರಿಗಳ ಅವಮಾನಕರ ಅಂಶವಾಗಿದೆ' ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ 2014 ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ.
PM’s hall of shame-
Minimum GDP
Maximum Unemployment. pic.twitter.com/9jQOCSaWgh— Rahul Gandhi (@RahulGandhi) June 1, 2021
ದೇಶದ ಅರ್ಥ ವ್ಯವಸ್ಥೆಯು 2020–21ರಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಒಟ್ಟು ಶೇಕಡ (–)7.3ರಷ್ಟು ಕುಸಿದಿದೆ. ಕುಸಿತದ ಪ್ರಮಾಣವು ಶೇ (–) 8ರಷ್ಟು ಇರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಈ ಹಿಂದೆ ಅಂದಾಜಿಸಿತ್ತು. ಈ ಬೆನ್ನಲ್ಲೇ ರಾಹುಲ್ ಹೇಳಿಕೆ ನೀಡಿದ್ದಾರೆ.
Black fungus महामारी के बारे में केंद्र सरकार स्पष्ट करे-
1. Amphotericin B दवाई की कमी के लिए क्या किया जा रहा है?
2. मरीज़ को ये दवा दिलाने की क्या प्रक्रिया है?
3. इलाज देने की बजाय मोदी सरकार जनता को औपचारिकताओं में क्यों फँसा रही है?
— Rahul Gandhi (@RahulGandhi) June 1, 2021
ಮ್ಯೂಕರ್ ಮೈಕೊಸಿಸ್ ಅಥವಾ ಶಿಲೀಂಧ್ರದ ಚಿಕಿತ್ಸೆ ಕುರಿತು ಪ್ರಶ್ನೆಗಳನ್ನು ಕೇಳಿರುವ ರಾಹುಲ್, ಆ್ಯಂಫೊಟೆರಿಸಿನ್–ಬಿ ಕೊರತೆಯ ಬಗ್ಗೆ ಏನು ಮಾಡಲಾಗುತ್ತಿದೆ? ರೋಗಿಗಳು ಈ ಔಷಧಿಯನ್ನು ಪಡೆಯಲು ಮಾಡುತ್ತಿರುವ ಸಹಾಯದ ವಿಧಾನವೇನು'. ಚಿಕಿತ್ಸೆ ನೀಡುವ ಬದಲು, ಮೋದಿ ಸರ್ಕಾರ ಔಪಚಾರಿಕತೆಗಳಲ್ಲಿ ಸಾರ್ವಜನಿಕರನ್ನು ಏಕೆ ತೊಡಗಿಸಿಕೊಂಡಿದೆ' ಎಂದವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಜಿಡಿಪಿ: ಶೇಕಡ (–)7.3ರಷ್ಟು ಕುಸಿತ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.