ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ದೇಶದಲ್ಲಿ ಒಟ್ಟು 5.94 ಲಕ್ಷ ಸಕ್ರಿಯ ಪ್ರಕರಣಗಳು

Last Updated 30 ಅಕ್ಟೋಬರ್ 2020, 4:54 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಶುಕ್ರವಾರ ಬೆಳಿಗ್ಗೆ 8ರ ವರೆಗೂ ಕೋವಿಡ್‌–19 ದೃಢಪಟ್ಟ 48,648 ಪ್ರಕರಣಗಳು ದಾಖಲಾಗಿವೆ.

ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 80,88,851 ತಲುಪಿದ್ದು, ಒಟ್ಟು ಪ್ರಕರಣಗಳ ಪೈಕಿ 73,73,375 ಜನ ಚೇತರಿಸಿಕೊಂಡಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.

ಸೋಂಕಿನಿಂದ ಈವರೆಗೂ 1,21,090 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 563 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ, ಇದೇ ಅವಧಿಯಲ್ಲಿ 57,386 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲೀಗ 5,94,386 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ 1,28,149 ಮಂದಿ, ಕೇರಳದಲ್ಲಿ 91,889, ಕರ್ನಾಟಕದಲ್ಲಿ 64,499 ಹಾಗೂ ದೆಹಲಿಯಲ್ಲಿ 30,952 ಸಕ್ರಿಯ ಪ್ರಕರಣಗಳಿವೆ.

ಅಕ್ಟೋಬರ್‌ 29ರ ವರೆಗೂ ದೇಶದಲ್ಲಿ ಒಟ್ಟು 10,77,28,088 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌–19 ಪರೀಕ್ಷೆ ನಡೆಸಲಾಗಿದೆ ಹಾಗೂ ಗುರುವಾರ ಒಂದೇ ದಿನ 11,64,648 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ.

ದೇಶದಲ್ಲಿ ಸೆಪ್ಟೆಂಬರ್‌ 16ರಂದು ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 50 ಲಕ್ಷ ದಾಟಿತು. ಸೆಪ್ಟೆಂಬರ್‌ 28ರಂದು 60 ಲಕ್ಷ ಹಾಗೂ ಅಕ್ಟೋಬರ್‌ 11ರಂದು ಪ್ರಕರಣಗಳ ಸಂಖ್ಯೆ 70 ಲಕ್ಷ ಹಾಗೂ ಅಕ್ಟೋಬರ್‌ 28ಕ್ಕೆ ಪ್ರಕರಣಗಳ ಸಂಖ್ಯೆ 80 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT