ಭೋಪಾಲ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣ ನಡುವೆ, ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಹಾಸಿಗೆಗಳ ಕೊರತೆಯನ್ನು ನೀಗಿಸುವುದಕ್ಕಾಗಿ ಪಶ್ಚಿಮ –ಮಧ್ಯ ರೈಲ್ವೆ ವಿಭಾಗ ಭೋಪಾಲ್ ರೈಲು ನಿಲ್ದಾಣದಲ್ಲಿ 20 ಐಸೊಲೇಷನ್ ಬೋಗಿಗಳನ್ನು ಸಿದ್ಧಗೊಳಿಸಿದ್ದು, ಇವುಗಳು ಭಾನುವಾರದಿಂದ ಕಾರ್ಯಾರಂಭ ಮಾಡಲಿವೆ.

‘ಭೋಪಾಲ್ ರೈಲು ನಿಲ್ದಾಣದ 6ನೇ ಪ್ಲಾಟ್‌ಫಾರಂನಲ್ಲಿರುವ ಈ ಬೋಗಿಗಳಲ್ಲಿ 320 ಹಾಸಿಗೆಗಳಿವೆ‘ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಶನಿವಾರ ಟ್ವೀಟ್ ಮಾಡಿದ್ದಾರೆ.

‘ಇವು ಕೇವಲ ಐಸೊಲೇಷನ್ ಕೇಂದ್ರಗಳಾಗಿದ್ದು, ಇವುಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಿಲ್ಲ. ಆಮ್ಲಜನಕದ ನೆರವು ಅಗತ್ಯವಿರುವ ಕೋವಿಡ್ ಸೋಂಕಿತರನ್ನು ಇಲ್ಲಿಗೆ ದಾಖಲಿಸಲು ಅವಕಾಶವಿಲ್ಲ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಶುಕ್ರವಾರ ಒಂದೇ ದಿನ 13,590 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ 4,72,785ಕ್ಕೆ ಏರಿದೆ. ಇಲ್ಲಿವರೆಗೆ ಕೋವಿಡ್‌ನಿಂದ 4,937 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ... ಆಮ್ಲಜನಕ ಪೂರೈಕೆಗೆ ಅಡ್ಡಿಮಾಡುವವರನ್ನು ಗಲ್ಲಿಗೇರಿಸುತ್ತೇವೆ: ದೆಹಲಿ ಹೈಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.