ತೆಲಂಗಾಣ: ವಕೀಲ ದಂಪತಿ ಬರ್ಬರ ಹತ್ಯೆ
ಕರಿಂನಗರ: ತೆಲಂಗಾಣ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ದಂಪತಿಯನ್ನು ಬುಧವಾರ ಹಾಡಹಗಲೇ ಪೆದ್ದಪಳ್ಳಿ ಜಿಲ್ಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವಕೀಲರಾದ ಗತ್ತು ವಾಮನ್ ರಾವ್ ಮತ್ತು ಅವರ ಪತ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಮಧ್ಯಾಹ್ನ 2.30ರ ವೇಳೆಗೆ ಹಿಂಬಾಲಿಸಿ ಬಂದ ಇಬ್ಬರು ವ್ಯಕ್ತಿಗಳು ರಾಮಗಿರಿ ಮಂಡಲ್‌ದ ಗ್ರಾಮವೊಂದರ ಬಳಿ ದಾಳಿ ಮಾಡಿದ್ದಾರೆ. ಚೂರಿ ಇರಿದು ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರೆ.
‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಗೃಹ ಸಚಿವ ಮಹಮೂದ್ ಅಲಿ ತಿಳಿಸಿದ್ದಾರೆ.
ಸ್ಥಳೀಯ ಟಿಆರ್‌ಎಸ್ ನಾಯಕರೊಬ್ಬರು ಈ ಹತ್ಯೆಗೆ ಕಾರಣ ಎಂದು ರಾವ್ ಸಾವಿಗೆ ಮುನ್ನ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಹತ್ಯೆ ಮಾಡಿದ ಇಬ್ಬರು ವೃತ್ತಿಪರ ಕೊಲೆಗಾರರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದೆ’ ಎಂದು ರಾಮಗುಂಡಂ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ತಿಳಿಸಿದ್ದಾರೆ.
ಈ ಹತ್ಯೆಯ ಹಿಂದೆ ಟಿಆರ್‌ಎಸ್ ಸ್ಥಳೀಯ ನಾಯಕನ ಕೈವಾಡವಿದೆ ಎಂದು ವಕೀಲ ರಾವ್ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ತೆಲಂಗಾಣ ವಕೀಲರ ಪರಿಷತ್ ಈ ಕೃತ್ಯವನ್ನು ಖಂಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.