ಶನಿವಾರ, ಅಕ್ಟೋಬರ್ 24, 2020
22 °C

ತನಿಖೆ: ದೌರ್ಜನ್ಯ ಆರೋಪ ಪರಿಗಣಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ತೆಲಂಗಾಣದ ಬಿಎಚ್‌ಇಎಲ್‌ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯಾಗಿದ್ದ ಮಹಿಳೆಯ ಸಾವಿನ ತನಿಖೆಯಲ್ಲಿ, ಆಕೆಯ ಮೇಲೆ ನಡೆದಿದೆ ಎನ್ನಲಾದ ‘ಲೈಂಗಿಕ ದೌರ್ಜನ್ಯದ’ ಆರೋಪವನ್ನೂ ಪರಿಗಣಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತಲಂಗಾಣ ಪೊಲೀಸರಿಗೆ ಸೂಚಿಸಿದೆ.

2009ರಲ್ಲಿ ಸಂಸ್ಥೆಯನ್ನು ಸೇರಿದ್ದ ಮಹಿಳೆಯು, 2019ರ ಅ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಮಗಳು ಬರೆದಿಟ್ಟ ಪತ್ರದಲ್ಲಿ ಮತ್ತು ಕೊನೆಯ ಬಾರಿ ಸಹೋದರಿಯ ಜತೆ ನಡೆಸಿದ ಸಂಭಾಷಣೆಯಲ್ಲಿ ತಾನು ಮೇಲಧಿಕಾರಿಯಿಂದ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದುದು ಸ್ಪಷ್ಟವಾಗಿದೆ. ಸಂಸ್ಥೆಯಲ್ಲಿ ಆಕೆಗೆ ಮಾನಸಿಕ ಹಿಂಸೆಯನ್ನೂ ನೀಡಲಾಗುತ್ತಿತ್ತು’ ಎಂದು ಆಕೆಯ ತಾಯಿ ಆರೋಪಿಸಿದ್ದರು.

ಆದರೆ, ತೆಲಂಗಾಣ ಪೊಲೀಸರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ, ಆರೋಪಿ ಅಧಿಕಾರಿಗೆ ಕ್ಲೀನ್‌ಚಿಟ್‌ ನೀಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು