ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಸಿಬ್ಬಂದಿ ಹಣಕ್ಕೆ ಒತ್ತಾಯಿಸುವುದನ್ನು ಸಹಿಸಲಾಗದು: ಸುಪ್ರೀಂಕೋರ್ಟ್

Last Updated 8 ಜನವರಿ 2022, 11:35 IST
ಅಕ್ಷರ ಗಾತ್ರ

ನವದೆಹಲಿ: ‘ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಹಣ ನೀಡುವಂತೆ ಒತ್ತಾಯಿಸುವುದು, ಕಾನೂನುಬಾಹಿರವಾಗಿ ಪಡೆಯುವುದನ್ನು ಸಹಿಸಲಾಗದು. ಗುಣಮಟ್ಟದ ಸೇವೆ ನ್ಯಾಯಮೂರ್ತಿಗಳಿಗಷ್ಟೇ ಅಲ್ಲ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಅನ್ವಯವಾಗಲಿದೆ’ ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.

ಆರೋಪಿಯೊಬ್ಬರನ್ನು ದೋಷಮುಕ್ತಗೊಳಿಸುವ ಕುರಿತಂತೆ ₹ 50 ಸಾವಿರ ನೀಡಲು ಒತ್ತಾಯಿಸಿದ್ದ ಪ್ರಕರಣದಲ್ಲಿ ಬಿಹಾರದ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ‘ಕಕ್ಷಿದಾರರು 24 ವರ್ಷ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಇದು, ಅವರ ವಿರುದ್ಧದ ಮೊದಲ ಆರೋಪ’ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್‌ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠವು, ‘ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಣಕ್ಕೆ ಒತ್ತಾಯಿಸುತ್ತೀರಾ? ತಪ್ಪನ್ನು ನಿಮ್ಮ ಕಕ್ಷಿದಾರರು ಒಪ್ಪಿಕೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿತು.

ಸೇವೆಯಿಂದ ವಜಾ ಮಾಡುವ ಕುರಿತ ಪಟ್ನಾ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ಕಕ್ಷಿದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ವಕೀಲರು ಹೇಳಿದರು.

ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಏಕೆ ಹೇಳುತ್ತೀರಿ. ತನಿಖೆಯ ನಂತರವೇ ಕ್ರಮ ಜರುಗಿಸಲಾಗಿದೆಯಲ್ಲವೇ? ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅದರ ನಂತರ ಏನು ಮಾಡಲಾಗುತ್ತದೆ? ಎಂದು ಪೀಠ ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT