ಬುಧವಾರ, ಆಗಸ್ಟ್ 10, 2022
23 °C

ಕೊವಾಕ್ಸಿನ್‌ನ ವೈಜ್ಞಾನಿಕ ಮಾನದಂಡಗಳು, ಬದ್ಧತೆ ಪಾರದರ್ಶಕವಾಗಿದೆ: ಭಾರತ್ ಬಯೋಟೆಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ ವೈಜ್ಞಾನಿಕ ಮಾನದಂಡಗಳು ಮತ್ತು ಬದ್ಧತೆಯು ಪಾರದರ್ಶಕವಾಗಿದೆ ಹಾಗೂ ಕಂಪನಿಯು ಈವರೆಗೆ ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಒಂಬತ್ತು ಸಂಶೋಧನಾ ಅಧ್ಯಯನಗಳನ್ನು ಪ್ರಕಟಿಸಿದೆ ಎಂದು ಭಾರತ್ ಬಯೋಟೆಕ್ ಶನಿವಾರ ಹೇಳಿದೆ.

'ಕೊವಾಕ್ಸಿನ್‌ನ ವೈಜ್ಞಾನಿಕ ಮಾನದಂಡಗಳು + ಬದ್ಧತೆ ಪಾರದರ್ಶಕವಾಗಿದೆ. ಅಕಾಡೆಮಿಕ್ ಜರ್ನಲ್‌ಗಳು, ವಿಮರ್ಶಕರು, ಎನ್‌ಐವಿ-ಐಸಿಎಂಆರ್-ಬಿಬಿ ಸಂಶೋಧಕರು-ವಿಜ್ಞಾನಿಗಳು, ಒಂಬತ್ತು ಅಧ್ಯಯನಗಳು ಮತ್ತು ಡೇಟಾವನ್ನು ಪ್ರಕಟಿಸಲಾಗಿದೆ' ಎಂದು ಭಾರತ್ ಬಯೋಟೆಕ್ ಸಹ ಸಂಸ್ಥಾಪಕ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೆಶಕರಾದ ಸುಸಿತ್ರಾ ಎಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹಂತ I ಮತ್ತು II ರ ಸಂಪೂರ್ಣ ದತ್ತಾಂಶ ಮತ್ತು ಕೊವಾಕ್ಸಿನ್‌ನ ಮೂರನೇ ಹಂತದ ಪ್ರಯೋಗಗಳ ಭಾಗಶಃ ದತ್ತಾಂಶವನ್ನು ಭಾರತದ ನಿಯಂತ್ರಕರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.

‘ಉತ್ತಮ ವಿಮರ್ಶೆಗೆ ಒಂದು ಸಮಯೋಚಿತ ವಿಧಾನದಲ್ಲಿ, ಕಂಪನಿಯು ಈಗಾಗಲೇ ಹನ್ನೆರಡು ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಹೆಸರಾಂತ ಐದು ಪೀರ್-ರಿವ್ಯೂಡ್ ಜರ್ನಲ್‌ಗಳಲ್ಲಿ ಕೊವಾಕ್ಸಿನ್‌ನ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಒಂಬತ್ತು ಸಂಶೋಧನಾ ಅಧ್ಯಯನಗಳನ್ನು ಪ್ರಕಟಿಸಿದೆ’ ಎಂದು ಅದು ಹೇಳಿದೆ.

ಕೋವಾಕ್ಸಿನ್, ಸಂಪೂರ್ಣ ನಿಷ್ಕ್ರಿಯಗೊಂಡ ಕೊರೊನಾ ವೈರಸ್ ಮೂಲಕ ತಯಾರಿಸಲಾದ ಲಸಿಕೆ, ಭಾರತದಲ್ಲಿ ಮಾನವರ ಮೇಲಿನ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಪ್ರಕಟಿಸಿದ ಮೊದಲ ಮತ್ತು ಏಕೈಕ ಉತ್ಪನ್ನವಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ಭಾರತ್ ಬಯೋಟೆಕ್ ಮೂರು ಪೂರ್ವಭಾವಿ ಅಧ್ಯಯನಗಳನ್ನು ಪೂರ್ಣಗೊಳಿಸಿದೆ, ಇವುಗಳನ್ನು ಪೀರ್-ರಿವ್ಯೂಡ್ ಜರ್ನಲ್ ಸೆಲ್‌ಪ್ರೆಸ್‌ನಲ್ಲಿ ಪ್ರಕಟಿಸಲಾಗಿದೆ. ಕೊವಾಕ್ಸಿನ್‌ನ ಹಂತ I ಮತ್ತು ಹಂತ II ಕ್ಲಿನಿಕಲ್ ಪ್ರಯೋಗದ ಕುರಿತಾದ ಅಧ್ಯಯನಗಳನ್ನು ದಿ ಲ್ಯಾನ್ಸೆಟ್‌ ಪ್ರಕಟಿಸಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ಕೋವ್ಯಾಕ್ಸಿನ್‌ನ ರೂಪಾಂತರಗಳ ತಟಸ್ಥೀಕರಣದ ಅಧ್ಯಯನಗಳ ಸಂಪೂರ್ಣ ಡೇಟಾವನ್ನು ಈಗಾಗಲೇ ಬಯೋಆರ್‌ಕ್ಸಿವ್, ಕ್ಲಿನಿಕಲ್ ಇಂಫೆಕ್ಷಿಯಸ್ ಡಿಸೀಸಸ್ ಮತ್ತು ಜರ್ನಲ್ ಆಫ್ ಟ್ರಾವೆಲ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು