ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 24,337 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 333 ಮಂದಿ ಮೃತಪಟ್ಟಿದ್ದು, 25,709 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಶನಿವಾರದ ವೇಳೆಗೆ 10 ಮಿಲಿಯನ್ ದಾಟಿದ್ದ ಕೊರೊನಾ ಸೋಂಕಿತರ ಸಂಖ್ಯೆಯು ಇದೀಗ 1,00,55,560 ಆಗಿದೆ. ದೇಶದಲ್ಲಿ ಈವರೆಗೆ 1,45,810 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 96.06 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಸದ್ಯ 3,03,639 ಸಕ್ರಿಯ ಪ್ರಕರಣಗಳಿವೆ.

ಅಮೆರಿಕದ ನಂತರ ಒಂದು ಕೋಟಿಗಿಂತ ಹೆಚ್ಚು ದೃಢಪಟ್ಟ ಕೊರೊನಾ ವೈರಸ್ ಸೋಂಕು ಪ್ರಕರಣಗಳನ್ನು ಹೊಂದಿರುವ ವಿಶ್ವದ ಎರಡನೇ ದೇಶ ಭಾರತವಾಗಿದೆ.

ಡಿಸೆಂಬರ್ 20ರ ವೇಳೆಗೆ 16 ಕೋಟಿಗೂ ಅಧಿಕ ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿನ್ನೆ (ಭಾನುವಾರ) 9,00,134 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

ಮುಂದಿನ ಆರು ತಿಂಗಳು ಮಾಸ್ಕ್ ಕಡ್ಡಾಯ

ಕೋವಿಡ್-19 ಇನ್ನು ಸಕ್ರಿಯವಾಗಿರುವುದರಿಂದಾಗಿ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಲಸಿಕೆಗಳು ಲಭ್ಯವಾದರೂ ಕೂಡ ಮುಂದಿನ ಕನಿಷ್ಠ ಆರು ತಿಂಗಳ ಕಾಲ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಕೇರಳದಲ್ಲಿ 7.05 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕೇರಳದಲ್ಲಿ 24 ಗಂಟೆಗಳ ಅವಧಿಯಲ್ಲಿ ಭಾನುವಾರ ಹೊಸದಾಗಿ 5,711 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 30 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯು 7.05 ಲಕ್ಷಕ್ಕೇರಿದೆ. 53,858 ಜನರ ಗಂಟಲು ದ್ರವ ಮಾದರಿಗಳನ್ನು ಭಾನುವಾರ ಪರೀಕ್ಷಿಸಲಾಗಿದೆ. ಈವರೆಗೆ 73.47 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 2,816 ಜನರು ಸಾವಿಗೀಜಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ 403 ಹೊಸ ಪ್ರಕರಣ

ಥಾಣೆಯಲ್ಲಿ ಸೋಮವಾರ 403 ಹೊಸ ಪ್ರಕರಣಗಳು ಪತ್ತೆಯಾಗಿದೆ. ಸೋಂಕಿಗೆ ಇನ್ನೂ ಏಳು ಜನರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ -19 ಸಾವಿನ ಸಂಖ್ಯೆ 5,878 ಕ್ಕೆ ಏರಿದೆ. ಸದ್ಯ 4,438 ಜನರು ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 2,28,615 ಜನರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.