ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: 12,881 ಹೊಸ ಪ್ರಕರಣ, 11,987 ಮಂದಿ ಬಿಡುಗಡೆ

Last Updated 18 ಫೆಬ್ರುವರಿ 2021, 6:26 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕಳೆದ 24 ತಾಸಿನಲ್ಲಿ ಹೊಸತಾಗಿ 12,881 ಕೋವಿಡ್-19 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಗುರುವಾರ ವರದಿ ಮಾಡಿದೆ.

ಇದೇ ಸಂದರ್ಭದಲ್ಲಿ 101 ಮಂದಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು 1,56,014 ಮಂದಿ ಸಾವನ್ನಪ್ಪಿದ್ದಾರೆ.

12,881 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,09,50,201ಕ್ಕೆ ತಲುಪಿದೆ.

ಇದರಲ್ಲಿ 1,37,342 ಸಕ್ರಿಯ ಪ್ರಕರಣಗಳಿದ್ದು, 1,06,56,845 ಮಂದಿ ರೋಗ ಮುಕ್ತಿ ಹೊಂದಿದ್ದಾರೆ. ಕಳೆದ 24 ತಾಸಿನಲ್ಲಿ11,987 ಮಂದಿ ಬಿಡುಗಡೆಯಾಗಿದ್ದಾರೆ.

ಏತನ್ಮಧ್ಯೆ ದೇಶದಲ್ಲಿ ಈ ವರೆಗೆ 94,22,228 ಕೋವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಪೈಕಿ ಕೋವಿಡ್-19 ಲಸಿಕೆ ನೀಡಿದ ಬಳಿಕ 37 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ 12 ಮಂದಿ ಮೃತಪಟ್ಟಿದ್ದು, 23 ಮಂದಿ ರೋಗದಿಂದ ಚೇತರಿಸಿದ್ದಾರೆ. ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತದಲ್ಲಿ ಕೋವಿಡ್-19 ಅಂಕಿಅಂಶ:
ಒಟ್ಟು ಪ್ರಕರಣ: 1,09,50,201
ಗುಣಮುಖ: 1,06,56,845
ಮರಣ: 1,56,014
ಸಕ್ರಿಯ ಪ್ರಕರಣಗಳು: 1,37,342

ಕೋವಿಡ್-19 ಲಸಿಕೆ ವಿತರಣೆ: 94,22,228

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT