ಭಾನುವಾರ, ಮೇ 16, 2021
28 °C

Covid-19 India Update: 3,92 ಲಕ್ಷ ಹೊಸ ಪ್ರಕರಣ, 3,689 ಮಂದಿ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೇಶದಲ್ಲಿ ಕೋವಿಡ್‌ ಸೋಂಕು ತೀವ್ರವಾಗಿ ಹರಡುತ್ತಿದ್ದು, ಹೊಸದಾಗಿ 3,689 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆಯು 2,15,542ಕ್ಕೆ ಏರಿಕೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ.

‘ಭಾರತದಲ್ಲಿ 3,92,488 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,95,57,457ಕ್ಕೆ ಹೆಚ್ಚಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ 33 ಲಕ್ಷವನ್ನು ದಾಟಿದೆ’ ಎಂದು ಸಚಿವಾಲಯ ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ದೇಶದಲ್ಲಿ 33,49,644 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ‍ಪೈಕಿ ಶೇಕಡ 17.13ರಷ್ಟು ಪಾಲನ್ನು ಹೊಂದಿದೆ. ಇನ್ನೊಂದೆಡೆ ಚೇತರಿಕೆ ಪ್ರಮಾಣವು ಶೇಕಡ 81.77ಕ್ಕೆ ಕುಸಿದಿದೆ.

‘ಈವರೆಗೆ 1,59,92,271 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣವು ಶೇಕಡ 1.10ಕ್ಕೆ ಇಳಿದಿದೆ’ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಶನಿವಾರ(ಮೇ.01) 18,04,954 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈವರೆಗೆ 29,01,42,339 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಮಹಾರಾಷ್ಟ್ರ(802), ದೆಹಲಿ(412),ಉತ್ತರ ಪ್ರದೇಶ(304),ಕರ್ನಾಟಕ(271), ಛತ್ತೀಸಗಢ(229), ಗುಜರಾತ್‌(172), ಜಾರ್ಖಾಂಡ್(169),ರಾಜಸ್ತಾನ(160),ತಮಿಳುನಾಡು(147), ಪಂಜಾಬ್‌(138), ಹರಿಯಾಣ(125),ಉತ್ತರಖಾಂಡ(107), ಪಶ್ಚಿಮ ಬಂಗಾಳ(103),ಮಧ್ಯಪ್ರದೇಶ(102) ಸೇರಿದಂತೆ ಒಟ್ಟು 3,689 ಸೋಂಕಿನಿಂದ ಹೊಸದಾಗಿ ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು