ಮಂಗಳವಾರ, ಜೂನ್ 22, 2021
24 °C

ಅಸ್ಸಾಂ ಮೆಡಿಕಲ್ ಕಾಲೇಜಿನಲ್ಲಿ 5 ಐಸಿಯು, 45 ಆಮ್ಲಜನಕ ಹಾಸಿಗೆ ಸಿದ್ಧಪಡಿಸಿದ ಸೇನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ತೇಜ್‌ಪುರ: ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಭಾರತೀಯ ಸೇನಾ ಸಿಬ್ಬಂದಿ ಅಸ್ಸಾಂನ ತೇಜ್‌ಪುರ ಮೆಡಿಕಲ್‌ ಕಾಲೇಜಿನಲ್ಲಿ ಐದು ಐಸಿಯು ಮತ್ತು ಆಮ್ಲಜನಕ ಸೌಲಭ್ಯವುಳ್ಳ 45 ಹಾಸಿಗೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಸೇನೆಯು ಶುಕ್ರವಾರ ತಿಳಿಸಿದೆ.

ʼಕೋವಿಡ್-19‌ ವಿರುದ್ಧ ಮುಂದುವರಿದಿರುವ ಹೋರಾಟದ ಭಾಗವಾಗಿ ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್‌ನ ಗಜರಾಜ್‌ ಸಿಬ್ಬಂದಿ ಐದು ಐಸಿಯು ಮತ್ತು ಆಮ್ಲಜನಕ ಸೌಲಭ್ಯವುಳ್ಳ 45 ಹಾಸಿಗೆಗಳನ್ನು ತೇಜ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ಸಿದ್ಧಪಡಿಸಿದ್ದಾರೆʼ ಎಂದು ಸೇನೆಯು ಟ್ವೀಟ್‌ ಮೂಲಕ ತಿಳಿಸಿದೆ.

 

ಸೇನೆಯ ನಾಲ್ಕು ಜನರ ವಿಶೇಷ ತಂಡದ ಕಾರ್ಯಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ʼಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚಿಸುವುದು ನಮಗೆ ದೊಡ್ಡ ಸವಾಲಾಗಿ ವೇಗವಾಗಿ ಬೆಳೆಯುತ್ತಿದೆ. ನಮ್ಮ ಮನವಿ ಮೇರೆಗೆ ತೇಜ್‌ಪುರದಲ್ಲಿರುವ ಸೇನೆಯ ನಾಲ್ವರು ಸಿಬ್ಬಂದಿ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಐದು ಐಸಿಯು ಮತ್ತು ಆಮ್ಲಜನಕ ಸೌಲಭ್ಯವುಳ್ಳ 45 ಹಾಸಿಗೆಗಳನ್ನು ಸಿದ್ಧಪಡಿಸಿದ್ದಾರೆ. ಎಂಥಾ ಸಾಧನೆ! ಅಂತಹ ಶ್ಲಾಘನೀಯ ಕಾರ್ಯ ಮಾಡಿದ ತಂಡಕ್ಕೆ ಕೃತಜ್ಞತೆಗಳುʼ ಎಂದು ಶರ್ಮಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು