ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಸತತ 3ನೇ ದಿನವೂ 30 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ

Last Updated 27 ಆಗಸ್ಟ್ 2021, 14:58 IST
ಅಕ್ಷರ ಗಾತ್ರ

ತಿರುವನಂತಪುರ: ನೆರೆಯ ಕೇರಳ ರಾಜ್ಯದಲ್ಲಿ ಸತತ ಮೂರನೇ ದಿನದಲ್ಲೂ 30 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ.

ಶುಕ್ರವಾರದಂದು 32,801 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿವೆ. 24 ತಾಸು ಅವಧಿಯಲ್ಲಿ 179 ಮಂದಿ ಮೃತಪಟ್ಟಿದ್ದು, ಇದುವರೆಗೆ 20,313 ಮಂದಿ ಅಸುನೀಗಿದ್ದಾರೆ.

ಬುಧವಾರ 31,445 ಹಾಗೂ ಗುರುವಾರದಂದು 30,007 ಸೋಂಕು ಪ್ರಕರಣಗಳು ದೃಢಪಟ್ಟಿದ್ದವು.

24 ಗಂಟೆ ಅವಧಿಯಲ್ಲಿ 1,70,703 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಪಾಸಿಟಿವಿಟಿ ದರ ಶೇ. 19.22ಕ್ಕೆ ತಲುಪಿದೆ. ಆಗಸ್ಟ್ 26ರಂದು ಇದು 18.03 ಆಗಿತ್ತು. ಸದ್ಯ 1,95,254 ಸಕ್ರಿಯ ಪ್ರಕರಣಗಳಿವೆ.

ಕೋವಿಡ್ ಮುಂಚೂಣಿಯ ಸೇನಾನಿಗಳಾದ 116 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲೆಗಳ ಪೈಕಿ ಮಲಪ್ಪುರಂದಲ್ಲಿ 4,032, ತ್ರಿಶೂರ್ 3,953, ಎರ್ನಾಕುಲಂ 3,627, ಕೋಯಿಕ್ಕೋಡ್ 3,362 ಹಾಗೂ ಕೊಲ್ಲಂನಲ್ಲಿ 2,828 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT