ಶನಿವಾರ, ಮೇ 15, 2021
26 °C

ಕೋವಿಡ್‌ ಪರಿಸ್ಥಿತಿ ಹಿನ್ನೆಲೆ: ತುರ್ತು ಪ್ರಕರಣಗಳಷ್ಟೇ ವಿಚಾರಣೆ –ದೆಹಲಿ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳ ತೀವ್ರ ಏರಿಕೆ ಕಾರಣದಿಂದ 2021ರಲ್ಲಿ ದಾಖಲಾದ ‘ಅತ್ಯಂತ ತುರ್ತು’ ಪ್ರಕರಣಗಳನ್ನಷ್ಟೇ ವಿಚಾರಣೆಗೆ ಪರಿಗಣಿಸಲು ದೆಹಲಿ ಹೈಕೋರ್ಟ್‌ ತೀರ್ಮಾನಿಸಿದೆ. ಏಪ್ರಿಲ್‌ 19ರಿಂದ ಇದು ಜಾರಿಗೆ ಬರಲಿದೆ ಎಂದು ಭಾನುವಾರ ಆದೇಶ ಹೊರಡಿಸಿದೆ.

ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮನೋಜ್‌ ಜೈನ್ ಅವರು ಆದೇಶ ಹೊರಡಿಸಿದ್ದು, ಮಾರ್ಚ್ 22, 2020 ಮತ್ತು ಡಿಸೆಂಬರ್ 31, 2020ರ ಅವಧಿಯಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದ್ದ ತುರ್ತು ಅಲ್ಲದ ಪ್ರಕರಣಗಳನ್ನು ಸದ್ಯ ವಿಚಾರಣೆ ನಡೆಸುವುದಿಲ್ಲ. ಸಾರಾಸಗಟಾಗಿ ಅವುಗಳ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಪಟ್ಟಿ ಮಾಡಿದ್ದ ಪ್ರಕರಣಗಳಲ್ಲಿ ತುರ್ತು ಎಂಬುದು ಇದ್ದರೆ ಈ ಕುರಿತು ನಿಯೋಜಿತ ಲಿಂಕ್‌ ಮೂಲಕ ಮನವಿ ಸಲ್ಲಿಸಬಹುದಾಗಿದೆ. ಎಲ್ಲ ಪೀಠಗಳು ಏ. 19ರಿಂದ ಜಾರಿಗೆ ಬರುವಂತೆ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆಗೆ ಪರಿಗಣಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು