ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 3ನೇ ಅಲೆ ಜುಲೈ 4ರಿಂದಲೇ ಪ್ರಾರಂಭವಾಗಿರಬಹುದು: ಭೌತ ವಿಜ್ಞಾನಿ

Last Updated 13 ಜುಲೈ 2021, 3:14 IST
ಅಕ್ಷರ ಗಾತ್ರ

ಹೈದರಾಬಾದ್: ಹಿರಿಯ ಭೌತವಿಜ್ಞಾನಿ, ಹೈದರಾಬಾದ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೊಬ್ಬರು ಭಾರತದಲ್ಲಿ ಕೋವಿಡ್ -19 ಹರಡುತ್ತಿರುವ ವಿಧಾನವನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದು, ಮೂರನೇ ಅಲೆಯು ಜುಲೈ 4ರಿಂದಲೇ ಪ್ರಾರಂಭವಾಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಹಿಂದಿನ 463 ದಿನಗಳ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯನ್ನು ವಿಶ್ಲೇಷಣೆ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿರುವ ಡಾ.ವಿಪಿನ್ ಶ್ರೀವಾಸ್ತವ, ಈ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ಅಲೆಯ ಆರಂಭದ ಸಂದರ್ಭಇದ್ದಂತಹ ವಾತಾವರಣವೇ ಜುಲೈ 4ರಂದು ಇದ್ದಂತೆ ಇದೆ ಎಂದು ಹೇಳಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ಹೊಸ ಅಲೆಯ ಸೂಚನೆ ಎಂದರೆ ದೈನಂದಿನ ಸಾವುಗಳ ಸಂಖ್ಯೆ ಏರಿಕೆ ಅಥವಾ ಇಳಿಕೆಯಾಗುವ ಬದಲಾವಣೆಯ ಸಂದರ್ಭಸಾವಿನ ಏರಿಳಿತ ಭಾರೀ ಪ್ರಮಾಣದಲ್ಲಿ ಕಂಡುಬರುತ್ತದೆ.

‘ನಾವು ಫೆಬ್ರುವರಿ ಮೊದಲ ವಾರ ಡಿಡಿಎಲ್‌(ಡೈಲಿ ಡೆತ್ ಲೋಡ್)ನಲ್ಲಿ ಇಂತಹುದ್ದೇ ಏರಿಳಿತಗಳನ್ನು ಹೊಂದಿದ್ದೆವು. ದೈನಂದಿನ ಸಾವುಗಳ ಸಂಖ್ಯೆ 100 ಅಥವಾ ಅದಕ್ಕಿಂತ ಕಡಿಮೆ ಆಗಿತ್ತು. ಆಗ ಸಾಂಕ್ರಾಮಿಕ ರೋಗವು ಹೊರಟು ಹೋಯಿತೆಂದು ನಾವು ಸಂತೋಷಪಡುತ್ತಿದ್ದೆವು! ಆ ನಂತರ ವಿನಾಶಕಾರಿ ಸ್ವರೂಪ ಪಡೆಯಿತು. ಫೆಬ್ರುಬರಿ ಆರಂಭದಲ್ಲಿ ಕಂಡುಬಂದ ವಾತಾವರಣವೇ ಜುಲೈ 4ರಿಂದ ಕಂಡುಬಂದಿದೆ’ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

‘ದೈನಂದಿನ ಸಾವಿನ ಸಂಖ್ಯೆ ಕಡಿಮೆಯಾಗುತ್ತಿರಲಿ ಎಂದು ಆಶಿಸೋಣ ಮತ್ತು ದೇವರಲ್ಲಿ ಪ್ರಾರ್ಥಿಸೋಣ’ಎಂದು ಡಾ. ಶ್ರೀವಾಸ್ತವ ಹೇಳಿದ್ದಾರೆ. ವಿನಾಶಕಾರಿ ಎರಡನೇ ಅಲೆಯನ್ನು ಅನುಭವಿಸಿದ ಜನರು ಮತ್ತು ಆಡಳಿತಗಳು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಹೊಸ ಅಲೆಯ ಪ್ರಾರಂಭದ ಬಗ್ಗೆ ಯಾವುದೇ ಅನುಮಾನವನ್ನು ಅತ್ಯಂತ ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT